ತಮಿಳುನಾಡು ಕಂಪನಿಯಲ್ಲಿ ಪೈಪ್ ಲೈನ್‌ನಿಂದ ಅಮೋನಿಯಾ ಅನಿಲ ಸೋರಿಕೆ: 12 ಮಂದಿ ಆಸ್ಪತ್ರೆಗೆ ದಾಖಲು

ತಮಿಳುನಾಡಿನ ಎನ್ನೋರ್ ನಲ್ಲಿ ಖಾಸಗಿ ಕಂಪನಿಯ ಪೈಪ್ ಲೈನ್‌ನಿಂದ ಅಮೋನಿಯಾ ಅನಿಲ ಸೋರಿಕೆಯಾದ ನಂತರ 12 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸಗೊಬ್ಬರಗಳನ್ನು ತಯಾರಿಸುವ ಮತ್ತು ಅಮೋನಿಯಾವನ್ನು ಕಚ್ಚಾ ವಸ್ತುವಾಗಿ ಬಳಸುವ ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ನಲ್ಲಿ ಈ ಘಟನೆ ನಡೆದಿದೆ. ಪೈಪ್ ಲೈನ್‌ನಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ನಡೆದಿದೆ ಎಂದು ಹೇಳಲಾದ ಅಮೋನಿಯಾ ಅನಿಲ ಸೋರಿಕೆಯ ಬಗ್ಗೆ ಅಧಿಕಾರಿಗಳಿಗೆ ಮಧ್ಯರಾತ್ರಿ 12.45 ರ ಸುಮಾರಿಗೆ ಕಂಪನಿಯಿಂದ ಸಂದೇಶ ಬಂದಿದೆ.
ಅನಿಲ ಸೋರಿಕೆಯು ಸ್ಥಳೀಯರಲ್ಲಿ (ಪೆರಿಯಕುಪ್ಪಂ, ಚಿನ್ನಕುಪ್ಪಂನಂತಹ ಹಳ್ಳಿಗಳಿಂದ) ಭೀತಿಯನ್ನು ಉಂಟುಮಾಡಿತು. ಅವರು ತೀವ್ರ ವಾಸನೆ, ಉಸಿರಾಟದ ತೊಂದರೆ ಮತ್ತು ಅಸ್ವಸ್ಥತೆಯ ಬಗ್ಗೆ ದೂರು ನೀಡಿದರು.
ಕೂಡಲೇ ಪೊಲೀಸರು ಮತ್ತು ಜಿಲ್ಲಾಡಳಿತವು ನಿವಾಸಿಗಳನ್ನು ಇತರ ಸ್ಥಳಗಳಿಗೆ ಸ್ಥಳಾಂತರಿಸಲು ಆಂಬ್ಯುಲೆನ್ಸ್ ಮತ್ತು ಸಾರ್ವಜನಿಕ ಸಾರಿಗೆಯನ್ನು ವ್ಯವಸ್ಥೆ ಮಾಡಿತು.
ಪೊಲೀಸ್ ಅಧಿಕಾರಿಗಳ ಪ್ರಕಾರ, ಅನಿಲ ಸೋರಿಕೆಯ ನಂತರ 12 ಗ್ರಾಮಸ್ಥರನ್ನು ಸ್ಟಾನ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಇನ್ನೂ ಅನೇಕರನ್ನು ಮಧ್ಯರಾತ್ರಿಯಲ್ಲಿ ಸಮುದಾಯ ಭವನಗಳು ಮತ್ತು ಇತರ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.