ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣ: ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ

27/12/2023
ಚಿತ್ರದುರ್ಗ: ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ನ ಎ2 ಆರೋಪಿ ಆಗಿರುವ ಲೇಡಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ರಶ್ಮಿಗೆ ಡಿಸೆಂಬರ್ 21ರಂದು ಹೈಕೋರ್ಟ್ ನಿಂದ ಬೇಲ್ ಮಂಜೂರಾಗಿತ್ತು. ಈ ಹಿನ್ನಲೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿ ಇಂದು ಬಿಡುಗಡೆಗೊಳಿಸಿದೆ.
ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯಕ್ಕೆ ವಾರ್ಡನ್ ರಶ್ಮಿ ಸಹಕಾರ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನಲೆ ಚಾರ್ಜ್ಶೀಟ್ನಲ್ಲಿ ಎರಡನೇ ಆರೋಪಿ ಆಗಿರುವ ವಾರ್ಡನ್ ವಿರುದ್ಧ, ಹಲವು ಗಂಭೀರ ಆರೋಪಗಳು ಕೇಳಿ ಬಂದಿದ್ದವು.
ಮುರುಘಾ ಶ್ರೀಗಳ ಬಳಿ ಬಾಲಕಿಯರನ್ನ ಕರೆದೊಯ್ಯುವ ಕೆಲಸವನ್ನ ಇದೇ ವಾರ್ಡನ್ ಮಾಡುತ್ತಿದ್ದಳು ಎನ್ನಲಾಗಿತ್ತು.