ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ | ಯುವಕ ಸಾವು | ಲಾರಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸರು - Mahanayaka
12:48 AM Thursday 29 - January 2026

ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ | ಯುವಕ ಸಾವು | ಲಾರಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸರು

16/02/2021

ಕಾಞಂಗಾಡ್:  ಕಂಟೈನರ್ ಲಾರಿ, ಬೈಕ್ ಗೆ ಡಿಕ್ಕಿ ಹೊಡೆದು ಯುವಕ ದಾರುಣವಾಗಿ ಮೃತಪಟ್ಟ ಘಟನೆ ಕಾಞಂಗಾಡ್ ಚಿತ್ತಾರಿಯಲ್ಲಿ ನಡೆದಿದೆ. ಬೈಕ್ ಗೆ ಡಿಕ್ಕಿ ಹೊಡೆದ ಬಳಿ ಲಾರಿ ನಿಲ್ಲಿಸದೇ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ಲಾರಿಯನ್ನು ಹಿಡಿದಿದ್ದಾರೆ.

ಬೇಕಲ ಕಡಪ್ಪುರದ 31 ವರ್ಷದ ಯುವಕ ವಿನೋದ್ ಅಪಘಾತದಲ್ಲಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಕಾಞಂಗಾಡ್  ರೈಲು ನಿಲ್ದಾಣಕ್ಕೆ ತೆರಳುತ್ತಿದ್ದಾಗ ಚಿತ್ತಾರಿ ಪೆಟ್ರೋಲ್ ಬಂಕ್ ಬಳಿ ಅಪಘಾತ ನಡೆದಿದೆ.

ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ವಿನೋದ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ  ಅವರು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಡಿಕ್ಕಿಯಾಗಿ ಪರಾರಿಯಾದ ಲಾರಿಯನ್ನು ಪಳ್ಳಿಕರೆ ಸಮೀಪದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ