ಹಾನಗಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಮತ್ತೆ ಮೂವರು ಆರೋಪಿಗಳ ಬಂಧನ

ಹಾವೇರಿ: ಹಾನಗಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಈವರೆಗೆ ಪೊಲೀಸರು ಒಟ್ಟು 14 ಆರೋಪಿಗಳನ್ನು ಬಂಧಿಸಿದ್ದಾರೆ.
26 ವರ್ಷದ ಇಸ್ಮಾಯಿಲ್ ಹುಬ್ಬಳ್ಳಿ, 27 ವರ್ಷದ ರಿಯಾಜ್ ಸವಿಕೆರೆ ಮತ್ತು 24 ವರ್ಷದ ನಿಯಾಜ್ ದರ್ಗಾ ಬಂಧಿತ ಆರೋಪಗಳಾಗಿದ್ದಾರೆ.
ಅನೈತಿಕ ಪೊಲೀಸ್ ಗಿರಿಯ ಸಂತ್ರಸ್ತೆ ಜನವರಿ 11ರಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ನನ್ನ ಮೇಲೆ ಪದೇ ಪದೇ ಅತ್ಯಾಚಾರವೆಸಗಲಾಗಿದೆ ಎಂದು ಹೇಳಕೆ ನೀಡಿದ್ದರು.
ಜನವರಿ 8 ರಂದು ಹಾನಗಲ್ ಪಟ್ಟಣದಲ್ಲಿ ಅನ್ಯ ಧರ್ಮದ ವ್ಯಕ್ತಿಯೊಂದಿಗೆ ಕಾಣಿಸಿಕೊಂಡ ಮಹಿಳೆಯನ್ನು ಹೋಟೆಲ್‌ನಿಂದ ಹೊರಗೆಳೆದು ಥಳಿಸಲಾಗಿತ್ತು ಎಂದು ಆರೋಪಿಸಲಾಗಿದೆ. ತಾನು ಹೋಟೆಲ್ ನಲ್ಲಿದ್ದಾಗ, ಐದರಿಂದ ಆರು ಜನರ ತಂಡವು ಒಳಗೆ ನುಗ್ಗಿ, ಪ್ರಶ್ನಿಸಿ ಬಲವಂತವಾಗಿ ತಮ್ಮ ಬೈಕ್ ಗಳಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದರು.
ತನ್ನನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದರು ಮತ್ತು ನಂತರ ಎಲ್ಲರೂ ನನ್ನ ಮೇಲೆ ಅತ್ಯಾಚಾರ ಎಸಗಿದರು. ಅನಂತರ ಕಾರಿಗೆ ಹತ್ತುವಂತೆ ಹೇಳಿ ಚಾಲಕ ಅತ್ಯಾಚಾರ ಎಸಗಿದ್ದಾನೆ. ಇಷ್ಟಕ್ಕೆ ನಿಲ್ಲಿಸದೇ ಇನ್ನೂ ಎರಡು ಮೂರು ಸ್ಥಳಗಳಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಬಳಿಕ ಆರೋಪಿಗಳು ಆಕೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಕರೆದೊಯ್ದು ಅಲ್ಲಿ ಬಸ್ ಹತ್ತಿಸಿದರು, ಅವರಿಗೆ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಪೊಲೀಸರಿಗೆ ಮಾಡಿರುವ ಮನವಿಯಲ್ಲಿ ಒತ್ತಾಯಿಸಿದ್ದರು.