ಫ್ರಿಸ್ಕೂಲ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದ ಬಾಲಕಿ ಸಾವು - Mahanayaka

ಫ್ರಿಸ್ಕೂಲ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದ ಬಾಲಕಿ ಸಾವು

gianna ann zito
26/01/2024


Provided by

ಬೆಂಗಳೂರು: ಫ್ರಿಸ್ಕೂಲ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದ 4 ವರ್ಷ ವಯಸ್ಸಿನ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ, ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜನವರಿ 22ರಂದು ಈ ಘಟನೆ ನಡೆದಿತ್ತು,  ಆಟವಾಡುತ್ತಿದ್ದ ಬಾಲಕಿ ಗಿಯನ್ನಾ ಆನ್ ಜಿಟೊ(4)  ಆಟವಾಡುತ್ತಿದ್ದ ವೇಳೆ ಮೂರನೇ ಮಹಡಿಯಿಂದ  ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೇರಳ ಮೂಲದ ಜಿಟೋ ಟೋಮಿ ಜೋಸೆಫ್ ಮತ್ತು ಬಿನಿಟ್ಟಾ ಥಾಮಸ್ ದಂಪತಿಯ ಪುತ್ರಿಯಾಗಿರುವ  ಗಿಯಾನ್ನಾ, ಗೋಡೆ ಹತ್ತಿ ಕೆಳಗೆ ಬಿದ್ದ ನಂತರವೂ ಶಾಲೆಯ ಅಧಿಕಾರಿಗಳು ಗಮನಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.  ಘಟನೆಗೆ ನಿಜವಾದ ಕಾರಣವನ್ನು  ಅಧಿಕಾರಿಗಳು ಮುಚ್ಚಿಡಲು ಪ್ರಯತ್ನಿಸಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬಂದಿವೆ.

ಘಟನೆಯ ನಿಜವಾದ ಕಾರಣವನ್ನು ಮುಚ್ಚಿಟ್ಟಿದ್ದ ಅಧಿಕಾರಿಗಳು ಬಾಲಕಿ ಡೇಕೇರ್‌ ನಲ್ಲಿ ಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದು, ವಾಂತಿ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ  ಎನ್ನಲಾಗಿದೆ. ಬಳಿಕ ಮೂರನೇ ಮಹಡಿಯಿಂದ ಬಿದ್ದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಗಿಯಾನ್ನಾ ಎತ್ತರ ಪ್ರದೇಶಗಳಿಗೆ ಹೋಗಲು ಭಯಪಡುತ್ತಿದ್ದಳು,  ಆಕೆ ಟೆರೇಸ್ ಗೆ ಹೋಗಿರುವ ಸಾಧ್ಯತೆಗಳಿಲ್ಲ ಎಂದು  ಕುಟುಂಬಸ್ಥರು ಘಟನೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ  ಶಾಲೆ ಹಾಗೂ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ