ಗಣರಾಜ್ಯೋತ್ಸವದಲ್ಲಿ ಕುಶಾಲತೋಪು ಹಾರಿಸುತ್ತಿದ್ದ ವೇಳೆ ಗ್ರಾ.ಪಂ. ಅಧ್ಯಕ್ಷೆಯ ಕಾಲಿಗೆ ಗುಂಡು! - Mahanayaka

ಗಣರಾಜ್ಯೋತ್ಸವದಲ್ಲಿ ಕುಶಾಲತೋಪು ಹಾರಿಸುತ್ತಿದ್ದ ವೇಳೆ ಗ್ರಾ.ಪಂ. ಅಧ್ಯಕ್ಷೆಯ ಕಾಲಿಗೆ ಗುಂಡು!

bullet
27/01/2024


Provided by

ಇಂಡಿ: ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ವೇಳೆ ಆಕಸ್ಮಿಕವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಕಾಲಿಗೆ ಗುಂಡೇಟು ತಗಲಿರುವ ಘಟನೆ ವಿಜಯಪುರದ ಇಂಡಿಯ ಹಿರೇರೂಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದಿದೆ.

ಕನ್ನಡಪರ ಸಂಘಟನೆಯ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಲ್ಲು ಗಿಣ್ಣಿ ಕುಶಾಲತೋಪು ಹಾರಿಸಿದ್ದಾರೆ. ಬಳಿಕ ಬಂದೂಕನ್ನು ಕೆಳಗೆ ಇಳಿಸಿ ಇಡುವ ವೇಳೆ ಆಕಸ್ಮಿಕವಾಗಿ ಮತ್ತೊಂದು ಗುಂಡು ಹಾರಿದ್ದು, ಅದು ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷೆ ಸೋಮವ್ವ ಹೊಸಮನಿ ಮೋಣಕಾಲಿಗೆ ತಗುಲಿದೆ.

ಗುಂಡೇಟಿನಿಂದ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಲ್ಲು ಗಿಣ್ಣಿ ಅವರನ್ನು ಬಂಧಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ