ರಾಷ್ಟ್ರಧ್ವಜ ಹಾರಿಸುವ ಧ್ವಜದಲ್ಲಿ ಹನುಮಧ್ವಜ ಹಾರಿಸಲು ಪಟ್ಟು ಹಿಡಿದ ಬಿಜೆಪಿ: ರಾಜ್ಯಾದ್ಯಂತ ಪ್ರತಿಭಟನೆ - Mahanayaka
7:43 PM Wednesday 27 - August 2025

ರಾಷ್ಟ್ರಧ್ವಜ ಹಾರಿಸುವ ಧ್ವಜದಲ್ಲಿ ಹನುಮಧ್ವಜ ಹಾರಿಸಲು ಪಟ್ಟು ಹಿಡಿದ ಬಿಜೆಪಿ: ರಾಜ್ಯಾದ್ಯಂತ ಪ್ರತಿಭಟನೆ

bjp protest
29/01/2024


Provided by

ಬೆಂಗಳೂರು: ಮಂಡ್ಯದ ಕೆರಗೋಡು ಗ್ರಾಮದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಧ್ವಜದಲ್ಲಿ ಹನುಮಧ್ವಜ ಹಾರಿಸಲು ಪಟ್ಟು ಹಿಡಿದಿರುವ ಬಿಜೆಪಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.  ಭಾರೀ ಹೈಡ್ರಾಮ ಕಂಡು ಬಂತು.

ರಾಜಕೀಯ ಪ್ರೇರಿತ ಈ ಪ್ರತಿಭಟನೆಗೆ ಈಗಾಗಲೇ ಪೊಲೀಸರು ಅನುಮತಿ ನಿರಾಕರಿಸಿ ನೊಟೀಸ್ ಜಾರಿ ಮಾಡಲಾಗಿದ್ದಾರೆ. ಆದರೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ವೇಳೆ  ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟವೂ ನಡೆದಿದ್ದು, ನಂತರ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಇನ್ನೂ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಆದ್ರೆ , ಅಶೋಕ್ ಆಗಮಿಸುವ ಮೊದಲೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಷ್ಟ್ರ ಧ್ವಜ ಮತ್ತು ನಾಡಧ್ವಜ ಹೊರತುಪಡಿಸಿ ಯಾವುದೇ ಧಾರ್ಮಿಕ, ರಾಜಕೀಯ ಧ್ವಜವನ್ನು ರಾಷ್ಟ್ರಧ್ವಜಸ್ಥಂಭದಲ್ಲಿ ಹಾರಿಸುವಂತಿಲ್ಲ. ಆದ್ರೆ ಇಂತಹ ಪ್ರತಿಭಟನೆಗೆ ಬಿಜೆಪಿ ಕೈಜೋಡಿಸಿರೋದು ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಪಕ್ಷದ ದೇಶಪ್ರೇಮವನ್ನು ಪ್ರಶ್ನಿಸುವಂತಾಗಿದೆ.

ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆ:

ಕೆರೆಗೋಡು ಗ್ರಾಮದಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನವರು ರಾಷ್ಟ್ರಧ್ವಜ ಹಾಗೂ ನಾಡ ಧ್ವಜ ಹಾರಿಸುವುದಕ್ಕಾಗಿ ಮಾತ್ರ ಧ್ವಜ ಸ್ಥಂಭ ಸ್ಥಾಪನೆಗೆ ಮುಚ್ಚಳಿಕೆ ಬರೆದುಕೊಟ್ಟು ಅನುಮತಿ ಪಡೆದಿದ್ದಾರೆ. ಬರೆದುಕೊಟ್ಟ ಮುಚ್ಚಳಿಕೆಯಂತೆ ಹಾಗೂ ಯಾವುದಕ್ಕೆ ಅನುಮತಿ ಪಡೆದಿದ್ದಾರೋ ಅದನ್ನ ಪಾಲಿಸಬೇಕೇ ಬೇಡವೇ?

ರಾಷ್ಟ್ರ ಧ್ವಜ ಹಾರಿಸುವ ಉದ್ದೇಶವನ್ನು ಹೈಜಾಕ್ ಮಾಡಿ ಮಂಡ್ಯದಲ್ಲಿ ಶಾಂತಿ ಕದಡಬೇಕು, ಸರ್ಕಾರಕ್ಕೆ ಸವಾಲು ಹಾಕಬೇಕು ಎನ್ನುವುದು ನಿಮ್ಮ ಪೂರ್ವಯೋಜಿತ ಹುನ್ನಾರವಾಗಿತ್ತಲ್ಲವೇ? ನಿಮ್ಮ ನಿಷ್ಠೆ ಸಂವಿಧಾನಕ್ಕೋ. ಮನುವಾದಕ್ಕೋ ? ನಿಮ್ಮ ನಿಷ್ಠೆ ದೇಶಕ್ಕೋ, ದೇಶದ್ರೋಹಕ್ಕೋ? ನಿಮ್ಮ ನಿಷ್ಠೆ ರಾಷ್ಟ್ರ ಧ್ವಜಕ್ಕೋ, ಧಾರ್ಮಿಕ ಧ್ವಜಕ್ಕೋ? ಉತ್ತರ ನೀಡುವ ದಮ್ಮು ತಾಕತ್ತು ಇದೆಯೇ ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.

ಇತ್ತೀಚಿನ ಸುದ್ದಿ