ಮುಂದಿನ 7 ದಿನಗಳೊಳಗೆ ಸಿಎಎ ಜಾರಿ: ಕೇಂದ್ರ ಸಚಿವ ಶಾಂತನು ಠಾಕೂರ್ - Mahanayaka
8:55 AM Thursday 15 - January 2026

ಮುಂದಿನ 7 ದಿನಗಳೊಳಗೆ ಸಿಎಎ ಜಾರಿ: ಕೇಂದ್ರ ಸಚಿವ ಶಾಂತನು ಠಾಕೂರ್

shathanu takur
29/01/2024

ಕೋಲ್ಕತ್ತ: ಮುಂದಿನ 7 ದಿನಗಳೊಳಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಶಾಂತನು ಠಾಕೂರ್ ಹೇಳಿದ್ದಾರೆ.

ಪಶ್ವಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಯಾಗಿದೆ. ಮುಂದಿನ 7 ದಿನಗಳೊಳಗೆ ಸಿಎಎ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಮುಂದಿನ 7 ದಿನಗಳಲ್ಲಿ ಸಿಎಎ ಜಾರಿಗೊಳಿಸುವುದು ನಾನು ನಿಮಗೆ ನೀಡುತ್ತಿರುವ ಗ್ಯಾರೆಂಟಿ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮಾತ್ರವಲ್ಲದೇ ಇಡೀ ದೇಶಾದ್ಯಂತ 7 ದಿನಗಳೊಳಗೆ ಸಿಎಎ ಕಾಯ್ದೆ ಜಾರಿಯಾಗಲಿದೆ ಎಂದು ಸಚಿವ ಶಾಂತನು ಠಾಕೂರ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ