ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸಿಪಿ, ಇನ್ಸ್ ಪೆಕ್ಟರ್ ಗಳಿಗೆ ವರ್ಗಾವಣೆ - Mahanayaka

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸಿಪಿ, ಇನ್ಸ್ ಪೆಕ್ಟರ್ ಗಳಿಗೆ ವರ್ಗಾವಣೆ

police
31/01/2024


Provided by

ದಕ್ಷಿಣ ಕನ್ನಡ: ಮಂಗಳೂರು ನಗರ ಕೇಂದ್ರ ಉಪ ವಿಭಾಗದ ಎಸಿಪಿ  ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್ ಪೆಕ್ಟರ್ ಗೆ ವರ್ಗಾವಣೆ ಮಾಡಲಾಗಿದೆ.

ಮಂಗಳೂರು ನಗರ ಕೇಂದ್ರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ಅವರನ್ನು ಮೈಸೂರು ಹಾಗೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದ್ದು,   ಪ್ರತಾಪ್ ಸಿಂಗ್ ತೋರಾಟ್  ಅವರನ್ನು ಮಹೇಶ್ ಕುಮಾರ್ ಅವರ ತೆರವಾದ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

ಸುಳ್ಯ ವೃತ್ತದ ಮೋಹನ್ ಕೊಠಾರಿ ಅವರನ್ನು ಡಿಸಿಆರ್ ಇ ಮಂಗಳೂರಿಗೆ, ಮಂಗಳೂರು ಪಶ್ಚಿಮ ಸಂಚಾರ ಠಾಣೆಯಿಂದ ಕೃಷ್ಣಾನಂದ ಜಿ.ನಾಯಕ್ ಅವರನ್ನು ದಕ್ಷಿಣ ಸಂಚಾರ ಠಾಣೆಗೆ, ಸಿಐಡಿ ವರ್ಗಾವಣೆ ಆದೇಶದಲ್ಲಿರುವ ಬಸಲಿಂಗಯ್ಯ ಜಿ. ಸುಬ್ರಪುರಮಠ್ ಅವರನ್ನು ಬೆಳ್ತಂಗಡಿ ಠಾಣೆಗೆ, ಕೊಣಾಜೆ ಠಾಣೆಯಿಂದ ಮಂಗಳೂರು ನಗರಕ್ಕೆ ವರ್ಗಾವಣೆ ಆದೇಶದಲ್ಲಿರುವ ನಾಗೇಶ್ ಎಸ್. ಹಸ್ಲರ್ ಅವರನ್ನು ಬರ್ಕೆ ಠಾಣೆಗೆ, ಪುತ್ತೂರು ನಗರ ಠಾಣೆಯಿಂದ ಸುನಿಲ್ ಕುಮಾರ್ ಎಂ.ಎಸ್,. ಅವರನ್ನು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಇತ್ತೀಚಿನ ಸುದ್ದಿ