ಬಿಎಂಟಿಸಿ ಬಸ್ ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಇಬ್ಬರು ಮಹಿಳೆಯರು! - Mahanayaka
10:49 PM Wednesday 12 - November 2025

ಬಿಎಂಟಿಸಿ ಬಸ್ ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಇಬ್ಬರು ಮಹಿಳೆಯರು!

banglore
08/02/2024

ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಇಬ್ಬರು ಮಹಿಳೆಯರು ಕ್ಷುಲ್ಲಕ ಕಾರಣಕ್ಕೆ ಚಪ್ಪಲಿಯಿಂದ ಹೊಡೆದಾಟ ನಡೆಸಿದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೆಜೆಸ್ಟಿಕ್ ನಿಂದ ಪೀಣ್ಯಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ ನಲ್ಲಿ ಬಸ್ ನ ಕಿಟಕಿಯ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ತಗಾದೆ ಆರಂಭಗೊಂಡಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಚಪ್ಪಲಿಯಿಂದ ಹಲ್ಲೆ ನಡೆಸಿಕೊಂಡಿದ್ದಾರೆ.

ಬಸ್ ನಲ್ಲಿ ಮಹಿಳೆಯರ ವೀರಾವೇಶದ ಹೋರಾಟ ಕಂಡು ಪ್ರಯಾಣಿಕರು ಸುಸ್ತಾಗಿದ್ದಾರೆ. ಹಲವರು ಹೊಡೆದಾಡಬೇಡಿ ಎಂದು ಬುದ್ಧಿ ಮಾತು ಹೇಳಿದರೂ ಕೇಳದ ಮಹಿಳೆಯರಿಬ್ಬರು ಮನಸೋ ಇಚ್ಛೆ ಪರಸ್ಪರ ಹಲ್ಲೆ ನಡೆಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ