ಬಿಡುವಿಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯಗೆ ಅನಾರೋಗ್ಯ: ಕಾವೇರಿ ನಿವಾಸದಲ್ಲಿ ವಿಶ್ರಾಂತಿ

19/02/2024
ಬೆಂಗಳೂರು: ಬಜೆಟ್ ಕೆಲಸದ ಒತ್ತಡ ಹಾಗೂ ನಿರಂತರ ಪ್ರವಾಸಗಳಿಂದಾಗಿ ಸಿಎಂ ಸಿದ್ದರಾಮಯ್ಯನವರ ಆರೋಗ್ಯ ಹದಗೆಟ್ಟಿದ್ದು, ಹೀಗಾಗಿ ಅವರು ಕಾವೇರಿ ನಿವಾಸಕ್ಕೆ ವಿಶ್ರಾಂತಿಗಾಗಿ ತೆರಳಿದ್ದಾರೆ.
ವರದಿಗಳ ಪ್ರಕಾರ, ಸಿದ್ದರಾಮಯ್ಯ ಅವರಿಗೆ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆ ವಿಶ್ರಾಂತಿ ಪಡೆಯಲು ಕಾವೇರಿ ನಿವಾಸಕ್ಕೆ ತೆರಳಿದ್ದಾರೆಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳು ಕಳೆದ ಕೆಲವು ದಿನಗಳಿಂದ ಬಜೆಟ್ ಸೇರಿದಂತೆ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇದೀಗ ವಿಶ್ರಾಂತಿ ಪಡೆಯಲು ಕಾವೇರಿ ನಿವಾಸಕ್ಕೆ ತೆರಳಿದ್ದಾರೆ.
ವಿಧಾನಮಂಡದಲ್ಲಿ ಅಧಿವೇಶನ ನಡೆಯುತ್ತಿದ್ದು, ಅನಾರೋಗ್ಯ ಕಾರಣದಿಂದಾಗಿ ಸಿಎಂ ಅಧಿವೇಶನದಿಂದ ಹೊರಗುಳಿದಿದ್ದಾರೆ. ಫೆ.15 ರಂದು ಮುಖ್ಯಮಂತ್ರಿಗಳು ಸತತ 3 ಗಂಟೆ 15 ನಿಮಿಷ ಸುದೀರ್ಘ ಬಜೆಟ್ ಭಾಷಣ ಮಾಡಿದ್ದರು.
ಬಳಿಕ ಮಂಗಳೂರು, ಮಂಡ್ಯ ಸೇರಿದಂತೆ 2 ದಿನಗಳ ನಿರಂತರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಈ ಹಿನ್ನೆಲೆ ಅನಾರೋಗ್ಯ ಎದುರಾಗಿದೆ ಎಂದು ಹೇಳಲಾಗಿದೆ.