ಶಾಲಾ ಬಾಲಕಿಗೆ ದೈಹಿಕ ಹಿಂಸೆ: ಹೊಟೇಲ್ ಮಾಲಿಕ ಅರೆಸ್ಟ್

21/02/2024
ಬಂಟ್ವಾಳ: ಅಪ್ರಾಪ್ತ ಶಾಲಾ ಬಾಲಕಿಗೆ ಹೊಟೇಲ್ ಮಾಲಿಕನೋರ್ವ ದೈಹಿಕ ಹಿಂಸೆ ನೀಡಿದ ಘಟನೆ ಸಜೀಪ ನಡು ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಜೀಪ ನಡು ಗ್ರಾಮದ ಅಬ್ದುಲ್ಲಾ ಬಂಧಿತ ಆರೋಪಿಯಾಗಿದ್ದು, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಅಪ್ರಾಪ್ತ ಬಾಲಕಿಗೆ ದೈಹಿಕ ಹಿಂಸೆ ನೀಡಿರುವ ಬಗ್ಗೆ ನೊಂದ ಬಾಲಕಿಯ ತಾಯಿ ಗ್ರಾಮಾಂತರ ಪೊಲೀಸ್ ಠಾಣೆಗೆ ಫೆ.18ರಂದು ದೂರು ನೀಡಿದ್ದರು. ಈ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ ಐ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.