ಜಗನ್ ರೆಡ್ಡಿ ಶಾಸಕರ ವಿರುದ್ಧ ಲೇಖನ ಬರೆದಿದ್ದಕ್ಕೆ ಆಕ್ರೋಶ: ಆಂಧ್ರದಲ್ಲಿ ಪತ್ರಿಕಾ ಕಚೇರಿ ಮೇಲೆ ದಾಳಿ - Mahanayaka
12:14 AM Friday 5 - September 2025

ಜಗನ್ ರೆಡ್ಡಿ ಶಾಸಕರ ವಿರುದ್ಧ ಲೇಖನ ಬರೆದಿದ್ದಕ್ಕೆ ಆಕ್ರೋಶ: ಆಂಧ್ರದಲ್ಲಿ ಪತ್ರಿಕಾ ಕಚೇರಿ ಮೇಲೆ ದಾಳಿ

21/02/2024


Provided by

ಆಂಧ್ರಪ್ರದೇಶದ ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್ ಸಿಪಿ) ಬೆಂಬಲಿಗರನ್ನು ಒಳಗೊಂಡ ಗುಂಪೊಂದು ಕರ್ನೂಲ್ ನಗರದ ತೆಲುಗು ಪತ್ರಿಕೆಯ ಕಚೇರಿಯ ಮೇಲೆ ದಾಳಿ ನಡೆಸಿದೆ.

ಈ ಘಟನೆಯನ್ನು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ವೈಎಸ್ ಶರ್ಮಿಳಾ ಖಂಡಿಸಿದ್ದಾರೆ.
ಈನಾಡು ಪತ್ರಿಕೆಯ ಆವರಣದಲ್ಲಿ ಈ ಘಟನೆ ನಡೆದಿದೆ. ಈ ಲೇಖನವನ್ನು ಪನ್ಯಂ ಶಾಸಕ ಕಟಾಸಾನಿ ರಂಭೂಪಾಲ್ ರೆಡ್ಡಿ ವಿರುದ್ಧ ಬರೆಯಲಾಗಿದೆ.

ಹಲವಾರು ವೈಎಸ್ಆರ್ ಸಿಪಿ ಕಾರ್ಯಕರ್ತರು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಮತ್ತು ಈ ಪತ್ರಿಕೆಯ ಮಾಲೀಕರಾದ ಮಾಧ್ಯಮ ಉದ್ಯಮಿ ರಾಮೋಜಿ ರಾವ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.

ಉದ್ರಿಕ್ತ ಗುಂಪು ಕಚೇರಿಯ ನಾಮಫಲಕ ಮತ್ತು ಕಿಟಕಿಗಳನ್ನು ಒಡೆದಿದೆ ಮತ್ತು ಆವರಣಕ್ಕೆ ನುಗ್ಗಲು ಪ್ರಯತ್ನಿಸಿದೆ ಎಂದು ವರದಿಯಾಗಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಈ ಪ್ರಕರಣದಲ್ಲಿ ಇನ್ನೂ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.

ಇತ್ತೀಚಿನ ಸುದ್ದಿ