ಕಾಂಡೋಮ್ ಪ್ಯಾಕ್ ಗಳ ಮೇಲೆ ರಾಜಕೀಯ ಪಕ್ಷಗಳ ಚಿಹ್ನೆ ಬಳಸಿ ಚುನಾವಣಾ ಪ್ರಚಾರ!

ಚುನಾವಣಾ ಪ್ರಚಾರಕ್ಕಾಗಿ ಅನೇಕ ವಸ್ತುಗಳನ್ನು ಪ್ರಚಾರಕ್ಕಾಗಿ ಬಳಸುತ್ತಾರೆ. ಆದರೆ ಆಂಧ್ರಪ್ರದೇಶದಲ್ಲಿ ಕಾಂಡೋಮ್ ಗಳ ಪ್ಯಾಕ್ ನಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಳಸುತಿರುವುದು ಭಾರೀ ವೈರಲ್ ಆಗಿದೆ.
YSRCP ಮತ್ತು TDP ಎಂಬ ಹೆಸರಿನ ಕಾಂಡೋಮ್ ಪ್ಯಾಕೆಟ್ ಗಳ ಮೇಲೆ ಪಕ್ಷದ ಚಿಹ್ನೆಗಳನ್ನು ಮುದ್ರಿಸಿ ಪಕ್ಷಗಳು ಪ್ರಚಾರಕ್ಕಾಗಿ ಬಳಸುತ್ತಿರುವುದು ಕಂಡು ಬಂದಿದೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತಾರೂಢ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮತ್ತು ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಚಿಹ್ನೆಗಳನ್ನು ಹೊಂದಿರುವ ಕಾಂಡೋಮ್ ಪ್ಯಾಕೆಟ್ ಗಳನ್ನು ಪಕ್ಷದ ಕಾರ್ಯಕರ್ತರು ಮತದಾರರಿಗೆ ಹಂಚುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಡೋಮ್ ಗಳ ಪ್ಯಾಕೆಟ್ ಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ YSRCP ಮತ್ತು TDP ಎಂಬ ಹೆಸರಿನ ಎರಡು ಪಕ್ಷಗಳ ಚಿಹ್ನೆಗಳಿರುವ ಕಾಂಡೋಮ್ ಪ್ಯಾಕೆಟ್ ಗಳ ವಿಡಿಯೋ ವೈರಲ್ ಆಗಿದೆ. ಇದು ಪರಸ್ಪರ ಟೀಕೆ ಟಿಪ್ಪಣಿಗಳಿಗೆ ಕಾರಣವಾಗಿದೆ.
ಚುನಾವಣಾ ಪ್ರಚಾರ ಕಾಂಡೋಮ್ ವರೆಗೂ ಬಂತು, ವಯಾಗ್ರ ವರೆಗೆ ಯಾವಾಗ ಬರುತ್ತೋ ಎಂದು YSRCP ಮತ್ತು TDP ನಾಯಕರು ಪರಸ್ಪರ ಟೀಕಿಸಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth