ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಅಮೂಲ್ ಡೂಡಲ್ ಗೆ ಸಾರ್ವಜನಿಕರ ಮೆಚ್ಚುಗೆ - Mahanayaka

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಅಮೂಲ್ ಡೂಡಲ್ ಗೆ ಸಾರ್ವಜನಿಕರ ಮೆಚ್ಚುಗೆ

19/02/2021

ನವದೆಹಲಿ: ಸತತ 11ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು,  ಇದೇ ಸಂದರ್ಭದಲ್ಲಿ  ಇಂಧನ ಬೆಲೆ ಏರಿಕೆಯ ಬಗ್ಗೆ  ದೇಶಾದ್ಯಂತ ಚರ್ಚೆಯಾಗುತ್ತಿದೆ. ಇದೇ ಸಂದರ್ಭದಲ್ಲಿ  ಖ್ಯಾತ ಬ್ರಾಂಡ್ ಅಮೂಲ್ ಬೆಲೆ ಏರಿಕೆಯ ಬಗ್ಗೆ ಡೂಡಲ್ ಪ್ರಕಟಿಸಿದೆ.

ಅಮೂಲ್ ಹುಡುಗಿ ತನ್ನ ಕಾರಿಗೆ ಇಂಧನ ತುಂಬಿಸುತ್ತಿರುವ ಪೋಸ್ಟರ್ ನ ಮೇಲೆ, painfuel increase ಎಂದು ಬೆಲೆ ಏರಿಕೆ ಬಗ್ಗೆ  ಹೇಳಿದ್ದು, ಅಮೂಲ್ ಕೈಗೆಟುಕುವ ರುಚಿ ಎಂದು ಬರೆಯಲಾಗಿದೆ.

ಇಂಧನ ಬೆಲೆ ಏರಿಕೆಯಿಂದ ಕಂಗೆಟ್ಟಿರುವ  ಜನ ಸಾಮಾನ್ಯರ ಪರವಾಗಿ ಧ್ವನಿಯೆತ್ತಿದ್ದಕ್ಕಾಗಿ ಅಮೂಲ್ ಕಂಪೆನಿಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

 

ಇತ್ತೀಚಿನ ಸುದ್ದಿ