ಬ್ಯಾಂಕ್ ವಂಚನೆ ಪ್ರಕರಣ: ಅಮೆರಿಕಕ್ಕೆ ಪರಾರಿಯಾಗಿದ್ದ ಆರೋಪಿ; 25 ವರ್ಷಗಳ ಬಳಿಕ ಬಂಧಿಸಿದ ಸಿಬಿಐ

25 ವರ್ಷಗಳಷ್ಟು ಹಳೆಯದಾದ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿಯನ್ನು ಇಂಟರ್ ಪೋಲ್ ಸಹಾಯದಿಂದ ಸಿಬಿಐ ಬಂಧಿಸಿದೆ. ಇಂಟರ್ ಪೋಲ್ ಚಾನೆಲ್‌ಗಳು ಮತ್ತು ನ್ಯಾಷನಲ್ ಸೆಂಟ್ರಲ್ ಬ್ಯೂರೋ-ವಾಷಿಂಗ್ಟನ್ ಸಹಯೋಗದೊಂದಿಗೆ ತನ್ನ ಗ್ಲೋಬಲ್ ಆಪರೇಶನ್ಸ್ ಸೆಂಟರ್ ಈ ಕಾರ್ಯಾಚರಣೆಯನ್ನು ನಿರ್ವಹಿಸಿದೆ ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಂಚನೆ, ಕಳ್ಳತನ ಮತ್ತು ಕ್ರಿಮಿನಲ್ ಪಿತೂರಿಯ ಅಪರಾಧಗಳನ್ನು ಒಳಗೊಂಡ 1998 ರಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿ ರಾಜೀವ್ ಮೆಹ್ತಾ ಸಿಬಿಐಗೆ ಬೇಕಾಗಿದ್ದರು. ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಅಮೆರಿಕಕ್ಕೆ ಪಲಾಯನ ಮಾಡಿದ್ದರು.
2000ರ ಜೂನ್ 16ರಂದು ಇಂಟರ್ ಪೋಲ್ ಜನರಲ್ ಸೆಕ್ರೆಟರಿಯೇಟ್ ನಿಂದ ರಾಜೀವ್ ಮೆಹ್ತಾ ವಿರುದ್ಧ ಸಿಬಿಐ ರೆಡ್ ನೋಟಿಸ್ ಹೊರಡಿಸಿತ್ತು. ಆರೋಪಿಗಳನ್ನು ಪತ್ತೆಹಚ್ಚುವ ಮತ್ತು ಬಂಧಿಸುವ ಉದ್ದೇಶದಿಂದ ಈ ನೋಟಿಸ್ ಅನ್ನು ಎಲ್ಲಾ ಇಂಟರ್ಪೋಲ್ ಸದಸ್ಯ ರಾಷ್ಟ್ರಗಳಿಗೆ ವಿತರಿಸಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth