ಮೋದಿ ಫೋಟೋ ಬಂದರೆ ಸಾಕು,  ಆ ಮನೆಗೆ ದಾರಿದ್ರ್ಯ ಬಂದಂತೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ - Mahanayaka
5:29 AM Wednesday 20 - August 2025

ಮೋದಿ ಫೋಟೋ ಬಂದರೆ ಸಾಕು,  ಆ ಮನೆಗೆ ದಾರಿದ್ರ್ಯ ಬಂದಂತೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

mallikarjun kharge
07/03/2024


Provided by

ಭೋಪಾಲ್ : ಮೋದಿ ಫೋಟೋ ಬಂತೆಂದರೆ ಸಾಕು, ಆ ಮನೆಗೆ ದರಿದ್ರ ಬಂತೆಂದೇ ಅರ್ಥ ಎಂದು ರಾಜ್ಯಸಭೆಯಲ್ಲಿ ವಿಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಧ್ಯ ಪ್ರದೇಶದ ಭದ್ನಾವರ್ ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಮಾತನಾಡಿದ ಅವರು, ಮೋದಿಯವರು ಅವರ ಬಗ್ಗೆ ಅವರೇ ಹೇಳುತ್ತಾರೆ, 56 ಇಂಚಿನ ಎದೆ ನನ್ನದೆಂದು. ಎರಡು ಕೋಟಿ ಉದ್ಯೋಗವನ್ನು ಪ್ರತೀ ವರ್ಷ ಸೃಷ್ಟಿಸುತ್ತೇನೆ ಎಂದು ಹೇಳಿದ್ದಾರೆ. ನಿಮಗೆ ಉದ್ಯೋಗ ಸಿಕ್ಕಿದೆಯಾ, ಒಂದು ನೀವು ಸುಳ್ಳು ಹೇಳುತ್ತಿರಬೇಕು, ಇಲ್ಲವೋ ಮೋದಿ ಸುಳ್ಳು ಹೇಳುತ್ತಿರಬೇಕು ಎಂದರು.

ಹದಿನೈದು ಲಕ್ಷ ನಿಮಗೆಲ್ಲಾ ಬಂತಾ? ಎಂದು ಪ್ರಶ್ನಿಸಿದ ಅವರು, ಮೋದಿ ಫೋಟೋ ಬಂತೆಂದರೆ ಸಾಕು, ಆ ಮನೆಗೆ ದರಿದ್ರ ಬಂತೆಂದೇ ಅರ್ಥ. ನೀವು ಈ ದೇಶದ ಪ್ರಧಾನಿ, ಮೋದಿ ಕಾ ಗ್ಯಾರಂಟಿ ಎಂದು ಹೇಗೆ ನೀವು ಹೇಳಲು ಸಾಧ್ಯ? ಬಿಜೆಪಿಯ ಗ್ಯಾರಂಟಿ ಎಂದು ಬೇಕಾದರೆ ಹೇಳಿ. ಉದ್ಯೋಗ ಮತ್ತು ಹದಿನೈದು ಲಕ್ಷ ಮೋದಿ ಗ್ಯಾರಂಟಿನಾ ? ಎಂದು ಪ್ರಶ್ನಿಸಿದರು.

ರೈತರ ಆದಾಯ ದ್ವಿಗುಣ, ಬೆಂಬಲ ಬೆಲೆ ಹೆಚ್ಚಳದ ಭರವಸೆ ನೀಡಿದ್ದ ಪ್ರಧಾನಿ ಮೋದಿಯ ಮಾತುಗಳು ಸುಳ್ಳಾಯ್ತು, ಮೋದಿ ಸುಳ್ಳಿನ ಸರದಾರ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ