ರಾಮೇಶ್ವರಂ ಬ್ಲಾಸ್ಟ್ ಪ್ರಕರಣ ಆರೋಪಿ ಬಸ್ ನಲ್ಲಿ ಓಡಾಡಿರುವ ಮಾಹಿತಿ ಲಭ್ಯ: ಸಚಿವ ಪರಮೇಶ್ವರ್

ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ವ್ಯಕ್ತಿಯನ್ನ ಟ್ರ್ಯಾಕ್ ಮಾಡ್ತಾ ಇದ್ದೇವೆ. ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ ಯಾವ್ಯಾವ ದಿಕ್ಕಿನಲ್ಲಿ ಹೋಗಿದ್ದಾರೆ ಅನ್ನೋದನ್ನ ಕಂಡು ಹಿಡಿಯ ಬೇಕಿದೆ. ಏಳೆಂಟು ತಂಡಗಳನ್ನು ಮಾಡಿ ಹುಡುಕ್ತಾ ಇದ್ದೇವೆ. ಸಿಸಿಬಿ ಜೊತೆಗೆ ಎನ್‌ಐಎ ನವರು ಪಿಕ್ಚರ್‌ಗೆ ಬಂದಿದ್ದಾರೆ ಹಾಗಾಗಿ ಸಿಸಿಬಿಯವರು ಯಾವ ಬಸ್‌ಗೆ ಆ ವ್ಯಕ್ತಿ ಹೋಗಿದ್ದ, ಯಾವ ರೂಟ್‌ನಲ್ಲಿ ಹೋಗಿದ್ದಾರೆ ಅನ್ನುವ ಲೀಡ್ ಹಿಡ್ಕೊಂಡು, ಹೋದಾಗ ತುಮಕೂರಿಗೆ ಬಂದಿದ್ದಾನೆ ಅನ್ನೋ ಮಾಹಿತಿ ಎಂದರು.
ಅದಕ್ಕಿಂತ ಮುಂದೆ ಹೋಗಿದ್ದಾನೆ ಅನ್ನೋ ಮಾಹಿತಿಯೂ ಇದೆ ಎಂದರು. ಸಿಸಿಟಿವಿ ಪೂಟೇಜ್ ಸೇರಿ ಎಲ್ಲವನ್ನು ಪರಿಶೀಲನೆ ಮಾಡ್ತಿದ್ದಾರೆ. ಯಾವ ಸಮಯದಲ್ಲಿ ಹೋಗಿದ್ದಾರೆ.ಏನು ಅನ್ನೋದನ್ನ ನೋಡ್ತಿದ್ದಾರೆ. ಕೆಲವು ಪಿಕ್ಚರ್ಸ್ ಬೆಂಗಳೂರಿನಲ್ಲಿ ಸಿಕ್ಕಿದೆ. ಅದನ್ನು ಪರಿಶೀಲನೆ ಮಾಡಿ ಟ್ರ್ಯಾಕ್ ಮಾಡ್ತಿದ್ದಾರೆ ಎಂದರು.
ನನಗನ್ನಿಸುತ್ತೆ ಆದಷ್ಟು ಶೀಘ್ರವಾಗಿ ಈ ಪ್ರಕರಣ ಭೇಧಿಸುವ ವಿಶ್ವಾಸವಿದೆ. ಆ ವ್ಯಕ್ತಿ ಸಿಗುವವರೆಗೂ ಆತನಿಗೆ ಸಂಘಟನೆಯ ನಂಟಿದೆ ಎಂದು ಹೇಳೋಕಾಗಲ್ಲ. ಶಂಕಿತ ನಾಲ್ವರನ್ನ ವಿಚಾರಣೆ ಮಾಡಿ ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದರು.
ಮತ್ತೆ ದಲಿತ ಸಿಎಂ ಹೇಳಿಕೆ ವಿಚಾರ:
ದಲಿತ ಸಿಎಂ ಬಗ್ಗೆ ನಾನೇನು ಮಾತಾಡಲ್ಲ. ಅದರ ಬಗ್ಗೆ ಉತ್ತರ ಕೊಡಲ್ಲ. ಸ್ಥಿರವಾದಂತಹ ಸರ್ಕಾರ ಕರ್ನಾಟಕದಲ್ಲಿದೆ.ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡಿತಾ ಇದೆ ಎಂದರು.
ಹಾಗಾಗಿ ದಲಿತ ಸಿಎಂ ಬಗ್ಗೆ ಮಾತನಾಡುವುದು ಪ್ರಸ್ತುತ ಅಲ್ಲ. ಮುಂದಿನ ದಿನದಲ್ಲಿ ದಲಿತ ಸಿಎಂ ಆಗಬೇಕೆಂಬ ಪ್ರಶ್ನೆಗೆ, ಮುಂದಿನದು ಮುಂದೆ ನೋಡೋಣ ಎಂದರು.
ವಿಡಿಯೋ ನೋಡಿ:
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth