ಮುರಿದು ಬೀಳುತ್ತಾ ಜೆಡಿಎಸ್—ಬಿಜೆಪಿ ಮೈತ್ರಿ: ಜೆಡಿಎಸ್ ನಾಯಕರನ್ನು ಲೆಕ್ಕಕ್ಕೇ ತಗೋಳ್ತಾ ಇಲ್ವಂತೆ!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ—ಜೆಡಿಎಸ್ ಮೈತ್ರಿ ದೇಶಾದ್ಯಂತ ಸುದ್ದಿಯಾಗಿತ್ತು. ಆದ್ರೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲೇ ಬಿಜೆಪಿ—ಜೆಡಿಎಸ್ ಮೈತ್ರಿ ಮುರಿದುಬೀಳುವ ಸಾಧ್ಯತೆಗಳು ಕಂಡು ಬಂದಿವೆ.
ದಳ—ಕಮಳ ದೋಸ್ತಿ ಬಿರುಕು ಬಿಟ್ಟಿದೆ ಅನ್ನೋ ಮಾತುಗಳು ಕೇಳಿ ಬಂದಿವೆ, ಮಂಡ್ಯ ಹಾಗೂ ಕೋಲಾರ ಸೀಟು ಹಂಚಿಕೆ ವಿಚಾರವಾಗಿ ಬಿಜೆಪಿ—ಜೆಡಿಎಸ್ ನಡುವೆ ಅಸಮಾಧಾನ ಸೃಷ್ಟಿಯಾಗಿದೆ.
ಮೈತ್ರಿ ವಿಚಾರವಾಗಿ ಬಿಜೆಪಿ ನಾಯಕರು ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದ, ಜೆಡಿಎಸ್ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಕಲಬುರಗಿಯಲ್ಲಿ, ಶಿವಮೊಗ್ಗದಲ್ಲಿ ರಾಲಿ ಮಾಡಿದ್ದಾರೆ. ಆದ್ರೆ ಮಾಜಿ ಪ್ರಧಾನಿ ದೇವೇಗೌಡರನ್ನಾಗಲಿ, ಹೆಚ್.ಡಿ. ಕುಮಾರಸ್ವಾಮಿ ಅವರನ್ನಾಗಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎನ್ನಲಾಗಿದೆ.
ಇನ್ನೊಂದೆಡೆ ಹಾಸನದಲ್ಲಿ ಪ್ರೀತಂಗೌಡ ಅವರು ಬಿಜೆಪಿಯ ನಿಯಂತ್ರಣಕ್ಕೆ ಸಿಗುತ್ತಿಲ್ಲ, ಮಂಡ್ಯ ಟಿಕೆಟ್ ವಿಚಾರದಲ್ಲಿ ಸುಮಲತಾ ಅವರನ್ನು ಕರೆದು ಮಾತನಾಡಿಸಿ ಬಿಜೆಪಿ ಗೊಂದಲ ಸೃಷ್ಟಿಸಿದೆ. ಜೆಡಿಎಸ್ ಗೆ ಹೆಚ್ಚು ಮತದಾರರಿರುವ ಕೋಲಾರದಲ್ಲಿ ನಮಗೆ ಟಿಕೆಟ್ ಬೇಕು ಎಂದು ಬಿಜೆಪಿ ಹಠ ಹಿಡಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದರೂ ಬಿಜೆಪಿ ಚಿಹ್ನೆಯಡಿ ಡಾ. ಮಂಜುನಾಥ್ ಅವರನ್ನು ನಿಲ್ಲಿಸಲಾಗಿದೆ. ಇದು ಜೆಡಿಎಸ್ ಪಕ್ಷದ ಅಸ್ಥಿತ್ವವನ್ನು ಪ್ರಶ್ನೆ ಮಾಡುವಂತಾಗಿದೆ.
ಚುನಾವಣೆ ಮನೆಯಂಗಳದಲ್ಲಿದ್ದರೂ ಇನ್ನೂ ಟಿಕೆಟ್ ಶೇರಿಂಗ್ ಚರ್ಚೆ ನಡೆದಿಲ್ಲ, ಬಿಜೆಪಿ ಪಟ್ಟಿ ಘೋಷಿಸುವಾಗಿ ಜೆಡಿಎಸ್ ನ್ನು ಬಿಜೆಪಿ ವರಿಷ್ಠರು ಲೆಕ್ಕಕ್ಕೇ ತೆಗೆದುಕೊಂಡಿಲ್ಲ, ಬಿಜೆಪಿ ಜೆಡಿಎಸ್ ನಾಯಕರ ಸಭೆಯೇ ನಡೆಯುತ್ತಿಲ್ಲ ಹೀಗಾಗಿ ಜೆಡಿಎಸ್ ಬಿಜೆಪಿ ಮೈತ್ರಿ ಕೇವಲ ಬಿಜೆಪಿಯನ್ನು ಮೆರೆಸಲಷ್ಟೇ ಸೀಮಿತವಾಗುತ್ತಿದೆ. ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾದಂತೆ ಬಿಜೆಪಿ ನಾಯಕರು ವರ್ತಿಸ್ತಾ ಇದ್ದಾರೆ ಎನ್ನುವ ಭಾವನೆ ಮೂಡಿದೆ. ಹೀಗಾಗಿ ಜೆಡಿಎಸ್ ಬಿಜೆಪಿ ಮೈತ್ರಿ ಸದ್ಯದಲ್ಲೇ ಮುರಿದು ಬೀಳಬಹುದು ಅನ್ನೋ ಮಾತು ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth