ಟಿಕೆಟ್‌ ಕೈ ತಪ್ಪುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಅನಂತ್‌ ಕುಮಾರ್‌ ಹೆಗಡೆ ಸೈಲೆಂಟ್!‌ - Mahanayaka

ಟಿಕೆಟ್‌ ಕೈ ತಪ್ಪುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಅನಂತ್‌ ಕುಮಾರ್‌ ಹೆಗಡೆ ಸೈಲೆಂಟ್!‌

anath kumar hegade
23/03/2024

ಉತ್ತರಕನ್ನಡ: ಸಂಸದ ಅನಂತ್‌ ಕುಮಾರ್‌ ಹೆಗಡೆಗೆ ಟಿಕೆಟ್‌ ಕೈ ತಪ್ಪುವ ಭೀತಿ ಶುರುವಾಗಿದ್ದು, ಉತ್ಸಾಹದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದ ಅನಂತ್‌ ಕುಮಾರ್‌ ಹೆಗಡೆ 2ನೇ ಪಟ್ಟಿಯಲ್ಲಿ ಕೂಡ ತನ್ನ ಹೆಸರು ಪ್ರಕಟವಾಗದ ಹಿನ್ನೆಲೆಯಲ್ಲಿ ಸೈಲೆಂಟ್‌ ಆಗಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ಬಳಿಕ 4 ವರ್ಷಗಳ ಕಾಲ ನಾಪತ್ತೆಯಾಗಿದ್ದ ಅನಂತ್‌ ಕುಮಾರ್‌ ಹೆಗಡೆ, ಈ ಬಾರಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪತ್ತೆ ಪ್ರತ್ಯಕ್ಷವಾಗಿದ್ದರು. ಅಲ್ಲದೇ ವಿವಾದಿತ ಹೇಳಿಕೆಗಳನ್ನು ನೀಡುತ್ತಾ, ಮತ್ತೊಮ್ಮೆ ಟಿಕೆಟ್‌ ಪಡೆಯಲು ಯತ್ನಿಸಿದ್ದರು.

ತಾನೇ ಬಿಜೆಪಿಯ ಅಭ್ಯರ್ಥಿ ಅಂತ ಬಿಂಬಿಸಿಕೊಳ್ತಾ ಇದ್ದ ಅನಂತ್‌ ಕುಮಾರ್‌ ಹೆಗಡೆ ಇದೀಗ ಎರಡನೇ ಪಟ್ಟಿಯಲ್ಲೂ ತನ್ನ ಹೆಸರು ಬಾರದ ಹಿನ್ನೆಲೆಯಲ್ಲಿ ಪ್ರಚಾರ, ನಿಗದಿಗೊಳಿಸಿದ್ದ  ಸಭೆಗಳನ್ನು ಮೊಟಕುಗೊಳಿಸಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಶಶಿಭೂಷಣ್‌ ಹೆಗ್ಡೆ,  ಚಕ್ರವರ್ತಿ ಸೂಲಿಬೆಲೆ ಮುಂತಾದವರ ಹೆಸರು ಕೇಳಿ ಬರುತ್ತಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ