ಪತಿಯ ಕಿರುಕುಳದಿಂದ ಬೇಸತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ

ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯಲ್ಲಿ 28 ವರ್ಷದ ಮಹಿಳೆಯೊಬ್ಬಳು ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಲೀಸ್ ವರದಿಗಳ ಪ್ರಕಾರ, ಸಂಗೀತಾ ಯಾದವ್ ಎಂದು ಗುರುತಿಸಲ್ಪಟ್ಟ ಮಹಿಳೆ ತನ್ನ ಒಂದೂವರೆ ವರ್ಷದ ಮೂರನೇ ಮಗಳನ್ನು ನೇಣಿಗೆ ಹಾಕಲು ಪ್ರಯತ್ನಿಸಿದ್ದಾಳೆ. ಪವಾಡಸದೃಶವಾಗಿ ಆಕೆ ಬದುಕುಳಿದಿದ್ದಾಳೆ.
ತನ್ನ ಪತಿಯು ಗಂಡು ಮಗು ಬೇಕೆಂದು ಟಾರ್ಚರ್ ನೀಡಿದ್ದರಿಂದ ತಾನು ಈ ರೀತಿಯ ಕೃತ್ಯ ಮಾಡಬೇಕಾಯಿತು ಎಂದು ಸಂಗೀತಾ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಮತ್ತೊಂದು ಮಗುವನ್ನು ಹೆರಲು ತನ್ನ ದೈಹಿಕ ಅಸಮರ್ಥತೆಯನ್ನು ಅವಳು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ತಾನು ಗಂಡು ಮಗುವಿಗೆ ಜನ್ಮ ನೀಡದ ಕಾರಣ ಪತಿ ರಂಜೀತ್ ಯಾದವ್ ತನ್ನನ್ನು ದೈಹಿಕವಾಗಿ ನಿಂದಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಆರು ವರ್ಷಗಳ ಹಿಂದೆ, ರಂಜೀತ್ ಯಾದವ್ ಅವರನ್ನು ಮದುವೆಯಾಗುವ ಮೊದಲು, ಸಂಗೀತಾ ತನ್ನ ಹೆತ್ತವರೊಂದಿಗೆ ರೈಸನ್ ಜಿಲ್ಲೆಯ ಸಲಾಮತ್ಪುರದಲ್ಲಿ ವಾಸಿಸುತ್ತಿದ್ದರು. ರಂಜೀತ್ ಯಾದವ್ ಕೃಷಿಯ ಜೊತೆಗೆ ಸಣ್ಣ ವ್ಯವಹಾರವನ್ನು ಹೊಂದಿದ್ದಾರೆ. ಇದು ಅವರ ಕುಟುಂಬದ ಉದ್ಯೋಗವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth