ನನ್ನ ಮಗನಿಗೆ ವಧು ಕೇಳಿದ್ರೆ, ಕಾಂಗ್ರೆಸ್ ನನಗೆ ವಧು ನೀಡಿದೆ: ಕಾಂಗ್ರೆಸ್ ಅಭ್ಯರ್ಥಿ ಕವಾಸಿ ಲಖ್ಮಾ

ಬಸ್ತಾರ್: ನಾನು ನನ್ನ ಮಗನಿಗೆ ವಧು ಕೇಳಿದ್ದೆ, ಆದರೆ ಪಕ್ಷ ನನಗೆ ವಧುವನ್ನು ನೀಡಿತು ಎಂದು ಛತ್ತೀಸ್ ಗಡದ ಮಾಜಿ ಸಚಿವ, ಬಸ್ತಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕವಾಸಿ ಲಖ್ಮಾ ಹೇಳಿದ್ದಾರೆ.
ಜಗದಲ್ ಪುರದ ಲಾಲ್ ಬಾಗ್ ಮೈದಾನದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಕಾಂಗ್ರೆಸ್ ಪಕ್ಷವೇ ನನಗೆ ಚುನಾವಣೆಗೆ ಟಿಕೆಟ್ ನೀಡಿದೆ. ನನಗೆ ಟಿಕೆಟ್ ಬೇಡ, ಒಂದು ವೇಳೆ ಕೊಡಲೇ ಬೇಕೆಂದಿದ್ದರೆ ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಆದರೆ ನಾನು ನನ್ನ ಮಗನಿಗೆ ವಧು ಕೇಳಿದ್ರೆ, ಕಾಂಗ್ರೆಸ್ ಪಕ್ಷ ನನಗೆ ವಧು ನೀಡಿದೆ ಎಂದು ಟಿಕೆಟ್ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಂದು ನಮ್ಮ ದೇಶವನ್ನು ಮಾರಾಟ ಮಾಡಲಾಗುತ್ತಿದೆ ಮತ್ತು ನಮ್ಮ ಸಂವಿಧಾನ ಅಪಾಯದಲ್ಲಿದೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth