ನಟಿ ಕಂಗನಾಗೆ ಟಿಕೆಟ್: ಬಿಜೆಪಿ ಪಕ್ಷದಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ - Mahanayaka
12:15 AM Saturday 23 - August 2025

ನಟಿ ಕಂಗನಾಗೆ ಟಿಕೆಟ್: ಬಿಜೆಪಿ ಪಕ್ಷದಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ

30/03/2024


Provided by

ಹಿಮಾಚಲ ಪ್ರದೇಶದ ಕುಲು ಲೋಕಸಭಾ ಕ್ಷೇತ್ರಕ್ಕೆ ನಟಿ ಕಂಗನಾ ರಣಾವತ್ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ್ದು ಇದೀಗ ಪಕ್ಷದೊಳಗೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಹೀಗಾಗಿ ಬಂಡಾಯ ಸಾಧ್ಯತೆ ನಿಚ್ಚಳವಾಗಿದೆ. ಕ್ಷೇತ್ರದ ವಿವಿಧ ಬಿಜೆಪಿ ಮುಖಂಡರು ಪ್ರತ್ಯೇಕವಾಗಿ ಸಭೆ ಸೇರಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಈಗ ಟಿಕೆಟ್ ನಿರಾಕರಿಸಲ್ಪಟ್ಟ ಬಿಜೆಪಿಯ ಮೂರೂ ನೇತಾರರು 2022ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇದೀಗ ಇವರೆಲ್ಲ ಬಂಡಯ ಎದ್ದಿದ್ದಾರೆ. ಕಂಗನಾ ರಣಾವತ್ ಅವರನ್ನು ಸೋಲಿಸುವುದಕ್ಕೆ ಇವರ ಬಂಡಾಯ ದಾರಾಳ ಸಾಕು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಮಾಜಿ ಬಿಜೆಪಿ ಸಂಸದ ಮಹೇಶ್ವರ್ ಸಿಂಗ್ ಅವರ ಮಗ ಹಿತೇಶ್ವರ್ ಸಿಂಗ್ ಹಿಮಾಚಲ ಪ್ರದೇಶದ ಮಾಜಿ ಬಿಜೆಪಿ ಜನರಲ್ ಸೆಕ್ರೆಟರಿ ರಾಮ್ ಸಿಂಗ್ ಮಾಜಿ ಶಾಸಕ ಕಿಶೋರಿಲಾಲ್ ಸಾಗರ್ ಮುಂತಾದವರು ಈ ಬಂಡಾಯ ಸಭೆಯಲ್ಲಿ ಭಾಗವಹಿಸಿದ್ದು ಬಿಜೆಪಿಯ ನಿದ್ದೆಗೆಡಿಸಿದೆ.

ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಮಾರ್ಚ್ 26ರಂದು ಕುಳುವಿಗೆ ಆಗಮಿಸಿ ಮಹೇಶ್ವರ ಸಿಂಗ್ ಅವರ ಜೊತೆ ಚರ್ಚೆ ನಡೆಸಿರುವುದು ಕೂಡ ಊಹಾಪೋಕ್ಕೆ ಕಾರಣವಾಗಿದೆ. ಕಂಗನಾ ರಣಾವತ್ ಅವರು ಸ್ಪರ್ಧಿಸಿರುವ ಕ್ಷೇತ್ರವು ಈಗ ಕಾಂಗ್ರೆಸ್‌ನ ಹಿಡಿತದಲ್ಲಿದ್ದು ಕಂಗನಾ ಇದನ್ನು ಕಸಿದುಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ