ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಏರ್ಪಡಿಸಿದ್ದ ರ‍್ಯಾಲಿಯಲ್ಲಿ 'ಅಲ್ಲಾಹು ಅಕ್ಬರ್' ಘೋಷಣೆ - Mahanayaka
12:20 AM Saturday 23 - August 2025

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಏರ್ಪಡಿಸಿದ್ದ ರ‍್ಯಾಲಿಯಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆ

30/03/2024


Provided by

ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಲೋಕಸಭಾ ಅಭ್ಯರ್ಥಿಯ ಪರವಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಏರ್ಪಡಿಸಿದ್ದ ರ‍್ಯಾಲಿಯ ಉದ್ದಕ್ಕೂ ಅಲ್ಲಾಹು ಅಕ್ಬರ್ ಎಂಬ ಘೋಷಣೆ ಮೊಳಗಿದ್ದು ಬಿಜೆಪಿಗೆ ಇರಿಸು ಮುರಿಸು ಉಂಟಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಸೀತಾಯಿ ದಿನತ್ ಅಸೆಂಬ್ಲಿ ಕ್ಷೇತ್ರಗಳ ಮುಸ್ಲಿಮರು ಈ ರ‍್ಯಾಲಿಯನ್ನು ಸಂಘಟಿಸಿರುವುದಾಗಿ ಬಿಜೆಪಿ ಕೂಚ್ ಬಿಹಾರ್ ಅಧ್ಯಕ್ಷ ಮತ್ತು ಶಾಸಕರೂ ಆಗಿರುವ ಸುಕುಮಾರ್ ರಾಯ್ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸಿಲಿಗುರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರ‍್ಯಾಲಿ ನಡೆಸಿದ್ದರು. ಈ ರ‍್ಯಾಲಿಯಲ್ಲಿ ಕೂಚ್ ಬಿಹಾರ್ ಜಿಲ್ಲೆಯ ಸುಪ್ತಾಬಾರಿ ಪ್ರದೇಶದ ರಾಜ್ ಬನ್ಸಿ ಮುಸ್ಲಿಂಗಳ ಪೈಕಿ ದೊಡ್ಡದೊಂದು ಗುಂಪು ಭಾಗವಹಿಸಿತ್ತು. ಈ ಮುಸ್ಲಿಮರನ್ನು ಸಂಘಟಿಸಿ ರ‍್ಯಾಲಿಯನ್ನು ನಡೆಸಲಾಗಿತ್ತು ಎಂದು ತಿಳಿದುಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ