ಬಾಡಿಗೆ ಮನೆ ನೋಡುವ ನೆಪದಲ್ಲಿ ಬಂದು ವೃದ್ಧೆಯನ್ನು ಕೊಂದು 5 ಪವನ್ ಚಿನ್ನ ದೋಚಿದ ದಂಪತಿ! - Mahanayaka
12:05 PM Wednesday 20 - August 2025

ಬಾಡಿಗೆ ಮನೆ ನೋಡುವ ನೆಪದಲ್ಲಿ ಬಂದು ವೃದ್ಧೆಯನ್ನು ಕೊಂದು 5 ಪವನ್ ಚಿನ್ನ ದೋಚಿದ ದಂಪತಿ!

crime
02/04/2024


Provided by

ತಮಿಳುನಾಡು: ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಒಂಟಿ ವೃದ್ದೆಯನ್ನು ಕೊಲೆ ಮಾಡಿ ಚಿನ್ನದ ಸರದೊಂದಿಗೆ ಪರಾರಿಯಾಗಿರುವ ಘಟನೆ ತಮಿಳುನಾಡಿನ ಹೊಸೂರುನಲ್ಲಿ ನಡೆದಿದೆ.

ಮೃತರನ್ನು ಸರಳಾದೇವಿ (67) ಎಂದು ಗುರುತಿಸಲಾಗಿದೆ. ಮೃತರು ಮನೆಯ ಎರಡನೇ ಮಹಡಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆಕೆಯ ಮನೆಯ ಮೊದಲ ಮಹಡಿಯನ್ನು ಬಾಡಿಗೆಗೆ ಕೊಡುವುದಾಗಿ ಫೋನ್ ನಂಬರ್ ನೊಂದಿಗೆ ಆ ಪ್ರದೇಶದಲ್ಲಿ ಜಾಹೀರಾತು ಹಾಕಲಾಗಿತ್ತು.

ಫೋನ್ ನಂಬರ್ ಗಮನಿಸಿ ಮನೆ ನೋಡುವ ಸೋಗಿನಲ್ಲಿ ದಂಪತಿ ವೃದ್ಧೆಯ ಮನೆಗೆ ಆಗಮಿಸಿದ್ದರು. ಈ ವೇಳೆ ವೃದ್ಧೆಯೊಬ್ಬರೇ ಮನೆಯಲ್ಲಿದ್ದು, ಅವರ ಮಗ, ಸೊಸೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು.

ವೃದ್ಧೆ ಒಬ್ಬರೇ ಇರುವುದನ್ನು ಗಮನಿಸಿದ ದಂಪತಿ, ವೃದ್ಧೆ ಸರಳದೇವಿಯ ಬಾಯಿಗೆ ಬಟ್ಟೆ ತುರುಕಿಸಿ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೇ, ಅವರು ಧರಿಸಿದ್ದ 5 ಪವನ್ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾರೆ.

ಇನ್ನೂ ವೃದ್ಧೆಯ ಮನೆಯಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿತ್ತು. ಕ್ಯಾಮರಾದಲ್ಲಿ ಸರಳಾದೇವಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಸರಳಾದೇವಿಯ ಮಗಳು ಕೂಡಲೇ ಸೊಸೆಗೆ ವಿಚಾರ ತಿಳಿಸಿದ್ದಾರೆ ಅವರು ಸ್ಥಳಕ್ಕೆ ತೆರಳಿ, ತಕ್ಷಣವೇ ಸರಳಾದೇವಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಘಟನೆ ಸಂಬಂಧ ಹೊಸೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ