ಫೇಸ್ ಬುಕ್ ನಲ್ಲಿ ಲವ್: ವಿವಾಹ ಬಂಧನದಲ್ಲಿ ಒಂದಾದ 80ರ ವಯಸ್ಸಿನ ವೃದ್ಧ 34ರ ಯುವತಿ - Mahanayaka

ಫೇಸ್ ಬುಕ್ ನಲ್ಲಿ ಲವ್: ವಿವಾಹ ಬಂಧನದಲ್ಲಿ ಒಂದಾದ 80ರ ವಯಸ್ಸಿನ ವೃದ್ಧ 34ರ ಯುವತಿ

baluram marriage love affair
03/04/2024


Provided by

ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಹಾಗೆಯೇ ಇಲ್ಲೊಂದು ಜೋಡಿ, ಪ್ರೀತಿಗೆ ವಯಸ್ಸಿನ ಮಿತಿಯೇ ಇಲ್ಲ ಎನ್ನುವುದನ್ನು ನಿರೂಪಿಸಿದೆ. ಇಲ್ಲೊಬ್ಬರು 34 ವರ್ಷ ವಯಸ್ಸಿನ ಮಹಿಳೆಯನ್ನು 80 ವರ್ಷ ವಯಸ್ಸಿನ  ವೃದ್ಧರೊಬ್ಬರು ವರಿಸಿದ್ದು, ಇದೀಗ ಭಾರೀ ಸುದ್ದಿಯಲ್ಲಿದ್ದಾರೆ.

ಹೌದು..! ಈ ಘಟನೆ ನಡೆದಿರೋದು  ಮಧ್ಯಪ್ರದೇಶದ ಅಗರ್ ಜಿಲ್ಲೆಯ ಸುಸ್ನ ತೆಹಸಿಲ್ ಬಳಿಯ ಮಗರಿಯಾ ಗ್ರಾಮದಲ್ಲಿ. ಬಲುರಾಮ್ ಮತ್ತು ಶೀಲಾ ಇವರಿಬ್ಬರಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದೆ.

ಪರಿಚಯ ಸ್ನೇಹವಾಗಿ ಬದಲಾಗಿದ್ದು ಬಳಿಕ ಗಾಢವಾದ ಪ್ರೀತಿಗೆ ಜೋಡಿ ಜಾರಿದೆ.  ಇಬ್ಬರ ನಡುವೆ 46 ವರ್ಷಗಳ ಅಂತರವಿತ್ತು. ಅಲ್ಲದೇ ಬಲುರಾಮ್ 80 ವರ್ಷದ ವಯೋ ವೃದ್ಧ ಕೂಡ ಆಗಿದ್ದಾರೆ. ಆದರೂ  ಯಾವುದನ್ನೂ ಲೆಕ್ಕಿಸದ ಜೋಡಿ ಇದೀಗ ವಿವಾಹ ಬಂಧನದಲ್ಲಿ ಒಂದಾಗಿದೆ.

ಶೀಲಾ ಇಂಗ್ಲೆ ಮಹಾರಾಷ್ಟ್ರದ ಅಮರಾವತಿಯವರಾಗಿದ್ದಾರೆ. ಸದ್ಯ ಇಬ್ಬರು ಕೂಡ ಕುಟುಂಬಸ್ಥರ ಸಮ್ಮುಖದಲ್ಲಿ  ಹಾರ ವಿನಿಮಯ ಮಾಡಿಕೊಂಡು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನವದಂಪತಿಯ ಫೋಟೋಗಳು  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ