ಬಿಸಿಲ ಕಾವು: ಎಚ್ಚರಿಕೆ ಜೊತೆಗೆ ಸಲಹೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ - Mahanayaka
10:57 PM Tuesday 14 - October 2025

ಬಿಸಿಲ ಕಾವು: ಎಚ್ಚರಿಕೆ ಜೊತೆಗೆ ಸಲಹೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

05/04/2024

ಬೇಸಿಗೆ ಕಾವು ಹೆಚ್ಚಾಗುತ್ತಿದೆ. ತಾಪಮಾನ ಮತ್ತು ಸಂಭಾವ್ಯ ಉಷ್ಣ ಅಲೆಗಳ ಪ್ರಭಾವದಿಂದ ಪಾರಾಗಲು ಸುರಕ್ಷೆಯ ಮಾರ್ಗಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಮದ್ಯ, ಚಹಾ, ಕಾಫಿ, ಸಿಹಿ ಮತ್ತು ಕಾರ್ಬೊನೇಟೆಡ್ ಪಾನೀಯಗಳ ಸೇವನೆಯಿಂದ ದೂರವಿರಿ ಎಂಬುದೂ ಸೇರಿದಂತೆ ಉಷ್ಣ ಸಂಬಂಧಿತ ಕಾಯಿಲೆಗಳನ್ನು ನಿಭಾಯಿಸುವ ಸಲಹೆ ನೀಡಲಾಗಿದೆ.


Provided by

ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳು ಹೀಗಿವೆ.
ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಿ, ಸೂರ್ಯನ ಬಿಸಿಲಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ಶರೀರ ಸಂಪೂರ್ಣ ಮುಚ್ಚುವಂತೆ ಬಟ್ಟೆ ಧರಿಸಿ, ಸಾಧ್ಯವಾದಷ್ಟು ಸಮಯ ಮನೆಯ ಒಳಗೇ ಇರಿ, ಒಂಟಿಯಾಗಿರುವ ಹಿರಿಯ ವ್ಯಕ್ತಿಗಳು ಮತ್ತು ಅನಾರೋಗ್ಯಪೀಡಿತರ ಆರೋಗ್ಯದ ಬಗ್ಗೆ ಪ್ರತಿದಿನ ನಿಗಾ ವಹಿಸಿ, ನಿಮ್ಮ ಮನೆಯನ್ನು ತಂಪಾಗಿರಿಸಿ.

ಪರದೆಗಳು,ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಿ. ರಾತ್ರಿಗಳಲ್ಲಿ ಕಿಟಕಿಗಳನ್ನು ತೆರೆದಿರಿಸಿ, ಹಗಲಿನ ಸಮಯದಲ್ಲಿ ಕೆಳ ಅಂತಸ್ತುಗಳಲ್ಲಿರಲು ಪ್ರಯತ್ನಿಸಿ, ಶರೀರವನ್ನು ತಂಪಾಗಿರಿಸಲು ಫ್ಯಾನ್ ಮತ್ತು ಒದ್ದೆ ಬಟ್ಟೆಗಳನ್ನು ಬಳಸಿ.
ಮಧ್ಯಾಹ್ನ 12 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ಹೊರಗೆ ಹೋಗುವುದನ್ನು ನಿಲ್ಲಿಸಿ. ಬಿಸಿಲಿನಲ್ಲಿ ಚಟುವಟಿಕೆಗಳನ್ನು ತಪ್ಪಿಸಿ, ಅಪರಾಹ್ನ 2ರಿಂದ 4ರವರೆಗೆ ಅಡುಗೆ ಮಾಡುವ ಗೋಜಿಗೆ ಹೋಗಬೇಡಿ, ವಾಹನಗಳಲ್ಲಿ ಮಕ್ಕಳನ್ನು ಮತ್ತು ಸಾಕುಪ್ರಾಣಿಗಳನ್ನು ಒಂಟಿಯಾಗಿ ಬಿಡಬೇಡಿ, ಬರಿಗಾಲಲ್ಲಿ ನಡೆಯಬೇಡಿ ಎಂದು ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ