ಏರ್‌ ಗನ್‌ ನಲ್ಲಿ ಆಟವಾಡುತ್ತಿದ್ದಾಗ ಮಿಸ್‌ ಫೈರ್:‌ ಎದೆಗೆ ಬಾಲ್ಸ್‌ ನುಗ್ಗಿ ಬಾಲಕನ ದಾರುಣ ಸಾವು - Mahanayaka

ಏರ್‌ ಗನ್‌ ನಲ್ಲಿ ಆಟವಾಡುತ್ತಿದ್ದಾಗ ಮಿಸ್‌ ಫೈರ್:‌ ಎದೆಗೆ ಬಾಲ್ಸ್‌ ನುಗ್ಗಿ ಬಾಲಕನ ದಾರುಣ ಸಾವು

crime news
11/04/2024


Provided by

ಚಿಕ್ಕಮಗಳೂರು: ಏರ್‌ ಗನ್‌ ನಲ್ಲಿ ಆಟವಾಡುತ್ತಿದ್ದ ವೇಳೆ ಅಚಾನಕ್ ಆಗಿ ಫೈರ್‌ ಆಗಿದ್ದು, ಬಾಲಕನ ಎದೆಗೆ ಬಾಲ್ಸ್‌ ಹೊಕ್ಕು ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

7 ವರ್ಷದ ಬಾಲಕ ವಿಷ್ಣು  ಮೃತಪಟ್ಟ ಬಾಲಕನಾಗಿದ್ದಾನೆ. ತೋಟದಲ್ಲಿ ಮಂಗಗಳನ್ನು ಓಡಿಸಲೆಂದು ಏರ್‌ ಗನ್‌ ಮನೆಯಲ್ಲಿ ಬಳಸಲಾಗುತ್ತಿತ್ತು. ಈ ಗನ್‌  ಹಿಡಿದುಕೊಂಡು ಬಾಲಕ ರೂಮ್‌ ನಲ್ಲಿ ಆಟವಾಡುತ್ತಿದ್ದ.

ಈ ವೇಳೆ ಅಚಾನಕ್‌ ಆಗಿ ಟ್ರಿಗರ್‌ ಅದುಮಿದ್ದು, ಬಾಲಕನ ಎದೆಗೆ ಬಾಲ್ಸ್‌ ನುಗ್ಗಿದ್ದು, ಬಾಲಕ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಮನೆಯಲ್ಲಿ ಪೋಷಕರು ಇದ್ದಾಗಲೇ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ