ಫೇಶಿಯಲ್ ಮಾಡೋಕೇ ತರಗತಿಯನ್ನು ಬಹಿಷ್ಕರಿಸಿದ ಪ್ರಾಂಶುಪಾಲೆ: ವೀಡಿಯೋ ಚಿತ್ರೀಕರಣ ಮಾಡಿದ ಶಿಕ್ಷಕಿ ಮೇಲೆ ಹಲ್ಲೆ

ಉತ್ತರ ಪ್ರದೇಶದ ಉನ್ನಾವೊದ ಶಾಲೆಯೊಂದರಲ್ಲಿ ಪ್ರಾಂಶುಪಾಲರು ಕ್ಯಾಂಪಸ್ ಒಳಗೆ ಫೇಶಿಯಲ್ ಮಾಡುತ್ತಿರುವುದನ್ನು ಶೂಟ್ ಮಾಡಿದ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪ್ರಾಂಶುಪಾಲರು ಶಿಕ್ಷಕಿಯ ಮೇಲೆ ಇಟ್ಟಿಗೆಯಿಂದ ಹೊಡೆದು ಅವಳ ಕೈಯನ್ನು ಕಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಗೀತಾ ಸಿಂಗ್ ಅವರು ತರಗತಿ ತೆಗೆದುಕೊಳ್ಳುವ ಬದಲು ಉನ್ನಾವೊದ ದಾದಾಮೌ ಪ್ರಾಥಮಿಕ ಶಾಲೆಯ ಅಡುಗೆಮನೆಯೊಳಗೆ ಫೇಶಿಯಲ್ ಮಾಡುತ್ತಿದ್ದಾಗ ಶಿಕ್ಷಕಿ ಅನಮ್ ಖಾನ್ ವೀಡಿಯೋ ಚಿತ್ರೀಕರಣ ಮಾಡಿದ್ದು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಶಿಕ್ಷಕಿಯ ಪ್ರಕಾರ ಪ್ರಾಂಶುಪಾಲರು ಅವಳನ್ನು ಇಟ್ಟಿಗೆಯಿಂದ ಹೊಡೆದು ಕೈ ಕಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ವೀಡಿಯೊ ವೈರಲ್ ಆದ ನಂತರ ಬ್ಲಾಕ್ ಶಿಕ್ಷಣ ಅಧಿಕಾರಿ ಈ ಪ್ರಕರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದು ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth