ಅವರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು: ನೇಹಾ ಹತ್ಯೆ ಬಗ್ಗೆ ಫಯಾಝ್ ತಾಯಿ ಹೇಳಿಕೆ - Mahanayaka

ಅವರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು: ನೇಹಾ ಹತ್ಯೆ ಬಗ್ಗೆ ಫಯಾಝ್ ತಾಯಿ ಹೇಳಿಕೆ

neha
20/04/2024


Provided by

ಧಾರವಾಡ: ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿ ಫಯಾಝ್ ತಾಯಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ಮಾಡಿದ ತಪ್ಪಿಗೆ ಇಡೀ ಕರ್ನಾಟಕದ ಜನತೆಗೆ ನಾನು ಕ್ಷಮೆ ಕೇಳುತ್ತೇನೆ.  ಹಾಗೆಯೇ ನೇಹಾ ತಂದೆ ತಾಯಿಗೆ ಕೂಡ ನಾನು ಕ್ಷಮೆ ಕೇಳುತ್ತೇನೆ ಎಂದು ಕಣ್ಣೀರು ಹಾಕಿದರು.

ನೇಹಾ ಕೂಡ ನನಗೆ ಮಗಳಿದ್ದಂತೆ,  ನನ್ನ ಮಗ ಬೇರೆ ಅಲ್ಲ, ಆ ಮಗು ಬೇರೆ ಅಲ್ಲ, ಅವಳ ತಂದೆ ತಾಯಿಗೆ ಎಷ್ಟು ದುಃಖ ಆಗಿದೆಯೋ  ಅಷ್ಟೇ ದುಃಖ ನನಗೂ ಆಗಿದೆ.  ಆದ್ರೆ ನನ್ನ ಮಗ ಮಾಡಿರೋದು ತಪ್ಪು. ಯಾವ ಮಕ್ಕಳಾದ್ರೂ ತಪ್ಪು ಮಾಡಿದ್ರೆ ತಪ್ಪು ತಪ್ಪೇ…  ಎಂದು ಕೈ ಮುಗಿದು ಕಣ್ಣೀರು ಹಾಕುತ್ತಾ ಅವರು ಮಾತನಾಡಿದರು.

ಈ ನೆಲದ ಕಾನೂನು ಏನು ಹೇಳುತ್ತೋ, ಆ ಕಾನೂನಿನ ಪ್ರಕಾರ  ಏನು ಶಿಕ್ಷೆ ಆಗಬೇಕೋ ಆಗಲಿ ಎಂದು ಹೇಳಿದರು.

ಅವರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನನಗೆ ಈ ವಿಚಾರ ಒಂದು ವರ್ಷದ ಹಿಂದೆ ಗೊತ್ತಾಗಿತ್ತು. ಕ್ಯಾಂಟಿನ್ ನಲ್ಲಿ ಕೂತಿದ್ದಾಗ ಆ ಮಗು ನೇಹಾ ಬಂದು ಅವಳಾಗಿಯೇ ಅವನ ಫೋನ್ ನಂಬರ್ ತೆಗೆದುಕೊಂಡಿದ್ದಳು. ಆ ನಂತರ ಅವನೊಂದಿಗೆ ಕಾಂಟೆಕ್ಟ್ ಇತ್ತು ಎಂದು ಹೇಳಿದರು.

ಅವನು ಬಹಳ ಬ್ರಿಲಿಯೆಂಟ್ ಇದ್ದ, ಐಎಎಸ್ ಮಾಡಿಸಬೇಕು ಅನ್ನೋ ಕನಸು ನನಗೆ ಇತ್ತು ಎಂದು ಇದೇ ವೇಳೆ ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ