10ನೇ ತರಗತಿ ಬಾಲಕಿಯನ್ನು ಅಪಹರಿಸಿ ಕಾಡಿಗೆ ಕರೆದೊಯ್ದ ದುಷ್ಕರ್ಮಿಗಳು | ಆ ಬಳಿಕ ನಡೆದದ್ದೇನು ಗೊತ್ತಾ? - Mahanayaka
4:37 AM Saturday 18 - October 2025

10ನೇ ತರಗತಿ ಬಾಲಕಿಯನ್ನು ಅಪಹರಿಸಿ ಕಾಡಿಗೆ ಕರೆದೊಯ್ದ ದುಷ್ಕರ್ಮಿಗಳು | ಆ ಬಳಿಕ ನಡೆದದ್ದೇನು ಗೊತ್ತಾ?

26/02/2021

ಯಲ್ಲಾಪುರ: ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ದಾರಿ ಕೇಳುವ ನೆಪದಲ್ಲಿ ಬಾಲಕಿಯನ್ನು ಅಪಹರಿಸಿದ ಘಟನೆ  ಬುಧವಾರ ಸಂಜೆ ನಡೆದಿದ್ದು, ಇದೀಗ ಬಾಲಕಿಯು ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.


Provided by

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ಹೋಗಿದ್ದ ಬಾಲಕಿ ಸಂಜೆಯಾದರೂ ಮನೆಗೆ ತಲುಪಿರಲಿಲ್ಲ. ಇದರಿಂದ ಆತಂಕಕ್ಕೊಳಗಾದ  ಮನೆಯವರು ವಿದ್ಯಾರ್ಥಿನಿಯನ್ನು ಹುಡುಕಾಡಿದ್ದಾರೆ.

ಸುಮಾರು ಮಧ್ಯರಾತ್ರಿಯವರೆಗೂ ಪೋಷಕರು ಹುಡುಕಾಡಿದ್ದು, ಈ ವೇಳೆ ಕಾಡಿನಲ್ಲಿ ಬಾಲಕಿ ಮರವೊಂದಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ದಾರಿ ಕೇಳುವ ನೆಪದಲ್ಲಿ ತನ್ನನ್ನು ಮೂವರು ಯುವಕರು ಅಪಹರಿಸಿದ್ದು, ಕಾಡಿಗೆ ಕರೆತಂದು ಮರಕ್ಕೆ ಕಟ್ಟಿ ಹಾಕಿ ಹೋಗಿದ್ದಾರೆ ಎಂದು  ಬಾಲಕಿ ಹೇಳಿದ್ದಾಳೆ.

ಘಟನಾ ಸ್ಥಳಕ್ಕೆ ಡಿವೈಎಸ್ ಪಿ ರವಿ ನಾಯ್ಕ ಪಿಐ ಸುರೇಶ ಯಳ್ಳೂರ ಹಾಗೂ ಪಿಎಸ್ ಐ ಮಂಜುನಾಥ ಗೌಡ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಇನ್ನೂ ಬಾಲಕಿಯನ್ನು ಯುವಕರು ಬೈಕ್ ನಲ್ಲಿ ಕರೆದುಕೊಂಡುಹೋಗಿರುವುದನ್ನು ನೋಡಿದ್ದೇವೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು  ಹೇಳಿದ್ದಾರೆ.

ಇತ್ತೀಚಿನ ಸುದ್ದಿ