ಹಸಿದಾಗ ಆಕೆಯ ಬಾಯಿಗೆ ಅನ್ನ ಹಾಕುವುದು ಮನುಷ್ಯತ್ವ, ಅದನ್ನು ಹಾಕೋದಲ್ಲ: ಪ್ರಜ್ವಲ್ ರೇವಣ್ಣ ಬಗ್ಗೆ ಪ್ರತಿಕ್ರಿಯಿಸಿದ್ರಾ ನಟಿ? - Mahanayaka

ಹಸಿದಾಗ ಆಕೆಯ ಬಾಯಿಗೆ ಅನ್ನ ಹಾಕುವುದು ಮನುಷ್ಯತ್ವ, ಅದನ್ನು ಹಾಕೋದಲ್ಲ: ಪ್ರಜ್ವಲ್ ರೇವಣ್ಣ ಬಗ್ಗೆ ಪ್ರತಿಕ್ರಿಯಿಸಿದ್ರಾ ನಟಿ?

rashmi gautam
01/05/2024


Provided by

ಹಾಸನದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ವಿಡಿಯೋ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದ್ದು, ಈ ನಡುವೆ ಟಾಲಿವುಡ್‌ ನಟಿಯೊಬ್ಬರು ಶಾಕಿಂಗ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಟಾಲಿವುಡ್‌ ನಟಿ ರಶ್ಮಿ ಗೌತಮ್‌ ಈ ಬಗ್ಗೆ ತಮ್ಮ ಇನ್‌ ಸ್ಟಾಗ್ರಾಂ ಸ್ಟೋರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಪುರುಷರು ಒಳ್ಳೆಯವರಾಗಿದ್ದರೆ ವ್ಯಭಿಚಾರ ಎಂಬುದೇ ಇರುತ್ತಿರಲಿಲ್ಲ ಎಂಬ ವಿಚಾರದ ಬಗ್ಗೆ ವಿವರಿಸುತ್ತಾ, ಮಹಿಳೆ ಬಡತನದಲ್ಲಿ ಹಸಿದಾಗ ಆಕೆಯ ಬಾಯಿಗೆ ಅನ್ನ ಹಾಕುವುದು ಮನುಷ್ಯತ್ವ. ಅಲ್ಲದೇ ಅದನ್ನು ಹಾಕೋದಲ್ಲ ಎಂದು ನೇರವಾಗಿ ಬರೆದುಕೊಂಡಿದ್ದಾರೆ.

ಸದ್ಯ ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದ್ದು, ಕೆಲವು ಸಿನಿಮಾ ಮಂದಿಯೂ ನಟಿಯ ಪೋಸ್ಟ್‌ ಅನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆ ಪರ ಧ್ವನಿ ಎತ್ತುವ ತೆಲುಗು ಗಾಯಕಿ ಚಿನ್ಮಯಿ ಶ್ರೀಪಾದ್‌ ಸಹ ಇದೇ ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಟಿ ರಶ್ಮಿ ಗೌತಮ್‌, ಇದೀಗ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದು ಪ್ರಜ್ವಲ್‌ ರೇವಣ್ಣ ಅವರ ಪ್ರಕರಣ ಗಮನಿಸಿಯೇ ಹಂಚಿಕೊಂಡಿದ್ದಾರಾ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ಅವರ ನೇರ ನುಡಿಯ ಪೋಸ್ಟ್‌ ಮಾತ್ರ ಎಲ್ಲರನ್ನು ಅಚ್ಚರಿಗೆ ದೂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ