ಸೌದಿಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳದ ಅಬ್ದುರಹೀಮ್ ಬಿಡುಗಡೆ ಪ್ರಕ್ರಿಯೆ ಪ್ರಗತಿ

ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಕೇರಳದ ಅಬ್ದುರಹೀಮ್ ಅವರ ಬಿಡುಗಡೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಬ್ದು ರಹೀಮ್ ಅವರಿಂದ ಹತ್ಯೆಗೀಡಾದ ಬಾಲಕನ ಕುಟುಂಬವನ್ನು ಸೌದಿ ನ್ಯಾಯಾಲಯವು ಫೋನ್ ಮೂಲಕ ಸಂಪರ್ಕಿಸಿದ್ದು ಅವರ ಅಭಿಪ್ರಾಯವನ್ನು ಕೇಳಿದೆ.
ಕುಟುಂಬವು ಅಪೇಕ್ಷಿಸಿರುವ ರಕ್ತ ಪರಿಹಾರದ ಹಣವನ್ನು ಸಂಗ್ರಹಿಸಲಾಗಿದ್ದು ಕುಟುಂಬ ಕ್ಷಮಿಸಲು ಒಪ್ಪಿಕೊಂಡಿದೆ. ಆದ್ದರಿಂದ ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಏಪ್ರಿಲ್ 15ರಂದು ಅಬ್ದುಲ್ ರಹೀಮ್ ಪರವಾಗಿ ವಕೀಲರು ನ್ಯಾಯಾಲಯದೊಂದಿಗೆ ಕೋರಿಕೊಂಡಿದ್ದರು. ಈ ನೆಲೆಯಲ್ಲಿ ನ್ಯಾಯಾಲಯವು ಮೃತಪಟ್ಟ ಬಾಲಕನ ಕುಟುಂಬವನ್ನು ಸಂಪರ್ಕಿಸಿ ವಕೀಲರ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ. ಇದು ನಿಜವಾಗಿ ಅಬ್ದುಲ್ ರಹೀಂ ಬಿಡುಗಡೆಯ ಕುರಿತಾಗಿರುವ ಆಶಾವಾದವನ್ನು ಹೆಚ್ಚಿಸಿದೆ ಎಂದು ವಕೀಲರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth