ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಮಗನಿಗೆ ಬಿಜೆಪಿ ಟಿಕೆಟ್: ಕುಸ್ತಿಪಟುಗಳಿಂದ ತೀವ್ರ ವಿರೋಧ

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಮಗನಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಬೆಳವಣಿಗೆಯನ್ನು ಪ್ರಬಲವಾಗಿ ಖಂಡಿಸಿರುವ ಕುಸ್ತಿಪಟುಗಳು ಭಾರತದ ಪುತ್ರಿಯರು ಸೋತಿದ್ದಾರೆ.ಬ್ರಿಜ್ ಬೂಶನ್ ಗೆದ್ದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಭೂಷಣ್ ಅವರ ಕಿರಿಯ ಪುತ್ರ 33 ವರ್ಷದ ಕರಣ್ ಅವರು ಇದೀಗ ತಂದೆಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಇವರು ಉತ್ತರಪ್ರದೇಶದ ಕುಸ್ತಿ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಭಾರತದ ಪುತ್ರಿಯರು ಸೋತಿದ್ದಾರೆ. ಬ್ರಿಜ್ ಭೂಷಣ್ ಗೆದ್ದಿದ್ದಾರೆ ಎಂದು ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸಾಕ್ಷಿ ಮಲ್ಲಿಕ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ನಾವೆಲ್ಲರೂ ನಮ್ಮ ವೃತ್ತಿಯನ್ನು ಪಣಕಿಟ್ಟು ಹಲವು ದಿನಗಳನ್ನು ಬೀದಿಯಲ್ಲಿ ಕಳೆದೆವು. ಇಷ್ಟಾಗಿಯೂ ಬ್ರಿಜ್ ಭೂಷಣ್ ಅವರನ್ನು ಬಂಧಿಸಿಲ್ಲ. ನಾವೆಲ್ಲರೂ ನ್ಯಾಯಕ್ಕಾಗಿ ಆಗ್ರಹಿಸಿದೆವು. ಬಂಧನ ಬಿಡಿ, ಅವರ ಮಗ ಟಿಕೆಟ್ ಪಡೆಯುವ ಮೂಲಕ ಭಾರತದ ಕೋಟ್ಯಾಂತರ ಪುತ್ರಿಯರ ಭಾವನೆಗಳಿಗೆ ಘಾಸಿಗೊಳಿಸಿದ್ದಾರೆ. ಕುಟುಂಬಕ್ಕೆ ಟಿಕೆಟ್ ದಕ್ಕಿದೆ. ಒಬ್ಬ ವ್ಯಕ್ತಿ ಎದುರು ಸರ್ಕಾರ ಏಕೆ ಇಷ್ಟು ದುರ್ಬಲವಾಗಿದೆ ಎಂದು ಸಾಕ್ಷಿ ಮಲ್ಲಿಕ್ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth