ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು - Mahanayaka

ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

04/05/2024


Provided by

ಕಳೆದ ವರ್ಷ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿ ಹಿಟ್ ಸ್ಕ್ವಾಡ್ ನ ಮೂವರು ಸದಸ್ಯರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕರಣ್ಪ್ರೀತ್ ಸಿಂಗ್ (28), ಕಮಲ್ಪ್ರೀತ್ ಸಿಂಗ್ (22) ಮತ್ತು ಕರಣ್ ಬ್ರಾರ್ (22) ಎಂದು ಗುರುತಿಸಲಾಗಿದೆ.
ಭಾರತ ಸರ್ಕಾರದೊಂದಿಗೆ ಅವರ ಸಂಬಂಧದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಆರ್ಸಿಎಂಪಿ ಸೂಪರಿಂಟೆಂಡೆಂಟ್ ಮನ್ದೀಪ್ ಮೂಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ತನಿಖಾಧಿಕಾರಿಗಳು ಕೆಲವು ತಿಂಗಳ ಹಿಂದೆ ಕೆನಡಾದಲ್ಲಿ ಶಂಕಿತರನ್ನು ಗುರುತಿಸಿದ್ದರು ಮತ್ತು ಅವರನ್ನು ಬಿಗಿ ಕಣ್ಗಾವಲಿನಲ್ಲಿ ಇರಿಸಿದ್ದರು.
ಹಿಟ್ ಸ್ಕ್ವಾಡ್ ನ ಸದಸ್ಯರು ನಿಜ್ಜರ್ ಹತ್ಯೆಯ ಸಮಯದಲ್ಲಿ ಶೂಟರ್ ಗಳು, ಚಾಲಕರು ಮತ್ತು ಸ್ಪಾಟರ್ ಗಳಾಗಿ ವಿವಿಧ ಪಾತ್ರಗಳನ್ನು ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕನಿಷ್ಠ ಎರಡು ಪ್ರಾಂತ್ಯಗಳಲ್ಲಿ ಪೊಲೀಸ್ ಕಾರ್ಯಾಚರಣೆಯ ಸಮಯದಲ್ಲಿ ಪುರುಷರನ್ನು ಬಂಧಿಸಲಾಗಿದೆ.

ಕೆನಡಾದ ಪೊಲೀಸರು ಈ ಪ್ರಕರಣದ ಬಗ್ಗೆ ಯುಎಸ್ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಹೆಚ್ಚಿನ ಬಂಧನಗಳು ಬರಬಹುದು ಎಂದು ಸೂಚಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ