ಕೋರ್ಟ್ ಆವರಣದಲ್ಲಿ ದುರ್ನಡತೆ: ಮೀರಾ ರಾಘವೇಂದ್ರ ವಕೀಲಿಕೆಯ ಸನ್ನದು ಅಮಾನತಿಗೆ ಶಿಫಾರಸು - Mahanayaka

ಕೋರ್ಟ್ ಆವರಣದಲ್ಲಿ ದುರ್ನಡತೆ: ಮೀರಾ ರಾಘವೇಂದ್ರ ವಕೀಲಿಕೆಯ ಸನ್ನದು ಅಮಾನತಿಗೆ ಶಿಫಾರಸು

26/02/2021


Provided by

ಬೆಂಗಳೂರು: ಕೋರ್ಟ್ ಮುಂಭಾಗದಲ್ಲಿಯೇ ದುರ್ನಡತೆ ಪ್ರದರ್ಶಿಸಿದ್ದಕ್ಕಾಗಿ ವಿವಾದಿತ ವಕೀಲೆ ಮೀರಾ ರಾಘವೇಂದ್ರ ಅವರ ವಕೀಲಿಯ ಸನ್ನದು ಅಮಾನತು ಮಾಡಲು ಶಿಫಾರಸು ಮಾಡಲಾಗಿದ್ದು, ಬಾರ್ ಕೌನ್ಸಿಲ್ ಉಪ ಸಮಿತಿಯಿಂದ ಈ ಶಿಫಾರಸು ಮಾಡಲಾಗಿದೆ ಎಂದು ವರದಿಯಾಗಿದೆ.

ಪ್ರೊಫೆಸರ್ ಕೆ.ಎಸ್. ಭಗವಾನ್ ಅವರ ಮುಖಕ್ಕೆ ಕೋರ್ಟ್ ಆವರಣದಲ್ಲಿಯೇ ಮಸಿಬಳಿದ ದುರ್ನಡತೆಯ ಹಿನ್ನೆಲೆಯಲ್ಲಿ ಈ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದ್ದು,  ಬಾರ್ ಕೌನ್ಸಿಲ್ ಸದಸ್ಯರಾದ ಎನ್.ಶಿವಕುಮಾರ್, ಎಂ.ದೇವರಾಜ ಹಾಗೂ ಎಂ.ಎನ್.ಮಧುಸೂದನ್ ಅವರನ್ನೊಳಗೊಂಡ ಉಪ ಸಮಿತಿ ವಿಚಾರಣೆ ನಡೆಸಲಿದೆ ಎಂದು ತಿಳಿದು ಬಂದಿದೆ.

ಈ ಶಿಸ್ತು ವಿಚಾರಣೆ ಮುಗಿಯುವವರೆಗೂ ಮೀರಾ ರಾಘವೇಂದ್ರ ಅವರ ವಕೀಲಿಕೆ ಸನ್ನದು ಅಮಾನತಿಗೆ ಶಿಫಾರಸು ಮಾಡಲಾಗಿದೆ. ಕೋರ್ಟ್ ಆವರಣದಲ್ಲಿ ತನ್ನ ತಂದೆಯ ವಯಸ್ಸಿನ ಹಿರಿಯ ನಾಗರಿಕರಾದ ಭಗವಾನ್ ಅವರ ಮುಖಕ್ಕೆ ಮಸಿ ಬಳಿದು ಮೀರಾ ದುರ್ನಡತೆ ತೋರಿದ್ದರು.

ನೀನು ಮೈಸೂರಿಗೆ ತಲುಪುವುದರೊಳಗೆ ನಿನ್ನನ್ನು ಕೊಲ್ಲಲಿದ್ದಾರೆ. ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ ಎಂದು ಭಗವಾನ್ ಗೆ ಬೆದರಿಕೆ ಹಾಕಿರುವುದಲ್ಲದೇ, ಇತರ ಇಬ್ಬರು ಸಾಹಿತಿಗಳ ಹತ್ಯೆಗೆ ನಾವು ಕಾರಣ ಎಂಬಂತೆ  ಅವರು ಮಾತನಾಡಿದ್ದರು.

ಇತ್ತೀಚಿನ ಸುದ್ದಿ