SSLC ಫಲಿತಾಂಶದ ಸುದ್ದಿ ತಿಳಿದು ಭಯಗೊಂಡು ವಿದ್ಯಾರ್ಥಿ ನಾಪತ್ತೆ! - Mahanayaka
10:42 AM Tuesday 27 - January 2026

SSLC ಫಲಿತಾಂಶದ ಸುದ್ದಿ ತಿಳಿದು ಭಯಗೊಂಡು ವಿದ್ಯಾರ್ಥಿ ನಾಪತ್ತೆ!

chandan gowda
09/05/2024

ಬೆಂಗಳೂರು: ಇಂದು SSLC ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆಯೇ ಭಯಗೊಂಡ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೆಟ್ಟಹಳ್ಳಿಯಲ್ಲಿ ನಡೆದಿದೆ.

ಮಂಡಿಗೆರೆ ಸರ್ಕಾರಿ ಶಾಲೆ ವಿದ್ಯಾರ್ಥಿ ಚಂದನ್ ಗೌಡ (16) ನಾಪತ್ತೆಯಾಗಿರುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಸುರೇಶ್ ಹಾಗೂ ರೂಪಾ ದಂಪತಿಯ ಮಗ ಚಂದನ್ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದಿದ್ದು, ಪರೀಕ್ಷೆ ಫಲಿತಾಂಶದಲ್ಲಿ ಫೇಲ್ ಆಗುವ ಭೀತಿಯಲ್ಲಿದ್ದ ಎನ್ನಲಾಗಿದೆ.

ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸುದ್ದಿ ತಿಳಿದು  ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿಯಲ್ಲಿ ನಾಪತ್ತೆಯಾಗಿದ್ದಾನೆ.

ಚಂದನ್ ಗೌಡ  ಬೈರನಾಯಕನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿ ಕಾಣೆಯಾಗಿದ್ದಾನೆ. ಹೀಗಾಗಿ  ಪೋಷಕರು ಆತಂಕದಿಂದ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಘಟನೆ ಸಂಬಂಧ ನೆಲಮಂಗಲ ಠಾಣೆಯಲ್ಲಿ ಪ್ರಕರ‍ಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ