ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪಾಪಿ ಅರೆಸ್ಟ್: ಇನ್ನೂ ಪತ್ತೆಯಾಗದ ರುಂಡ - Mahanayaka

ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪಾಪಿ ಅರೆಸ್ಟ್: ಇನ್ನೂ ಪತ್ತೆಯಾಗದ ರುಂಡ

kodagu
11/05/2024


Provided by

ಕೊಡಗು: SSLC ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಭೀಕರವಾಗಿ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕಾಶ್ ಬಂಧಿತ ಆರೋಪಿಯಾಗಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯ ವಿದ್ಯಾರ್ಥಿನಿ ಮೀನಾ 100% ಫಲಿತಾಂಶ ತಂದು ಕೊಟ್ಟಿದ್ದಳು.  ಇದೇ ಖುಷಿಯಲ್ಲಿದ್ದ ಬಾಲಕಿಯನ್ನು ಸಂಜೆ ವೇಳೆಗೆ ಆರೋಪಿ ಪ್ರಕಾಶ್ ಬರ್ಬರವಾಗಿ ಹತ್ಯೆ ಮಾಡಿ ಬಾಲಕಿಯ ರುಂಡ ಹಾಗೂ ಕೋವಿ ಹಿಡಿದುಕೊಂಡು ಪರಾರಿಯಾಗಿದ್ದ. ಸದ್ಯ ಕಾಡಿನಲ್ಲಿದ್ದ ಆರೋಪಿಯನ್ನು ಬಂಧಿಸಿ, ಪೊಲೀಸರು ಸೋಮವಾರಪೇಟೆ ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ.

ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದರೂ,  ಬಾಲಕಿಯ ರುಂಡವನ್ನು ಪತ್ತೆ ಹಚ್ಚಿಲ್ಲ, ಈ ಪ್ರಕರಣದಲ್ಲಿ ಬಾಲಕಿಯ ರುಂಡ ಪತ್ತೆಯಾಗುವುದು ಬಹುಮುಖ್ಯವಾದ ಅಂಶವಾಗಿದೆ. ಹೀಗಾಗಿ ಆರೋಪಿಯ ವಿಚಾರಣೆ ಬಳಿಕ ಪೊಲೀಸರು ರುಂಡು ಪತ್ತೆಗೆ ಮುಂದಾಗಲಿದ್ದಾರೆ ಎನ್ನಲಾಗಿದೆ.

ಹತ್ಯೆ ಮಾಡಿ ರುಂಡ-ಮುಂಡ ಬೇರ್ಪಡಿಸಿ ಆರೋಪಿ ಪರಾರಿಯಾಗಿದ್ದ. ರುಂಡದೊಂದಿಗೆ ಎಸ್ಕೇಪ್‌ ಆಗಿದ್ದ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಕೊನೆಗೂ ಪೊಲೀಸರ ಕೈಗೆ ಪ್ರಕಾಶ್‌ ಸಿಕ್ಕಿಬಿದ್ದಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ