ಅಂದು ರಾಹುಲ್.. ಇಂದು ಖರ್ಗೆ: ಬಿಹಾರದಲ್ಲಿ ಕಾಂಗ್ರೆಸ್ ಅಧ್ಯಕ್ಷರ ಹೆಲಿಕಾಪ್ಟರ್ ತಪಾಸಣೆ; ಕಮಲ ವಿರುದ್ಧ ಕೈ ಪಡೆ ಗರಂ

ವಿರೋಧ ಪಕ್ಷದ ನಾಯಕರನ್ನು ಚುನಾವಣಾ ಅಧಿಕಾರಿಗಳು ಗುರಿಯಾಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಭಾನುವಾರ ಗಂಭೀರವಾಗಿ ಆರೋಪಿಸಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಿಹಾರ ಭೇಟಿಯ ಸಂದರ್ಭದಲ್ಲಿ ಅವರ ಹೆಲಿಕಾಪ್ಟರ್ ಅನ್ನು ಶೋಧಿಸಿದ ನಂತರ ಈ ಆರೋಪಗಳು ಕೇಳಿಬಂದಿವೆ. ಬಿಜೆಪಿ ನೇತೃತ್ವದ ಎನ್ ಡಿಎ ನಾಯಕರು ‘ಮುಕ್ತವಾಗಿ’ ತಿರುಗಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.
ಖರ್ಗೆ ಶನಿವಾರ ಬಿಹಾರದಲ್ಲಿ ಎರಡು ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದರು. ಒಂದು ಸಮಸ್ತಿಪುರ ಮತ್ತು ಇನ್ನೊಂದು ಮುಜಾಫರ್ಪುರದಲ್ಲಿ.
ಬಿಹಾರ ಕಾಂಗ್ರೆಸ್ ಘಟಕದ ಮುಖ್ಯ ವಕ್ತಾರ ರಾಜೇಶ್ ರಾಥೋರೆ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಅನ್ನು ಪರಿಶೀಲಿಸಲಾಯಿತು. ಈಗ ಖರ್ಗೆ ಅವರ ಹೆಲಿಕಾಪ್ಟರ್ ಅನ್ನು ಬಿಹಾರದ ಸಮಸ್ತಿಪುರದಲ್ಲಿ ಪರಿಶೀಲಿಸಲಾಗಿದೆ ಎಂದು ಒತ್ತಿ ಬರೆದಿದ್ದಾರೆ.
ಹೆಲಿಕಾಪ್ಟರ್ ಅನ್ನು ಪೊಲೀಸರು ಸುತ್ತುವರೆದಿರುವ ವೀಡಿಯೊವನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ. ಖರ್ಗೆ ಅವರ ಹೆಲಿಕಾಪ್ಟರ್ ತಪಾಸಣೆಯನ್ನು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ರಾಥೋರೆ ಹೇಳಿದರು.
ಕಾಂಗ್ರೆಸ್ ನಾಯಕರ ಹೆಲಿಕಾಪ್ಟರ್ ಗಳ ತಪಾಸಣೆಯು ನಿಯಮನುಸಾರ ಮಾಡಲಾಗಿದ್ಯಾ ಅಥವಾ ಎನ್ ಡಿಎಯ ಉನ್ನತ ನಾಯಕರ ಮೇಲೂ ಇದೇ ರೀತಿಯ ತಪಾಸಣೆ ನಡೆಸಲಾಗಿದೆಯೇ ಎಂಬುದನ್ನು ಚುನಾವಣಾ ಆಯೋಗ (ಇಸಿ) ಸ್ಪಷ್ಟಪಡಿಸಬೇಕು ಎಂದು ರಾಥೋಡ್ ತಮ್ಮ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಶೋಧದ ಸಮಯದಲ್ಲಿ ಅಧಿಕಾರಿಗಳು ನಾಯಕನ ಊಟ ಮತ್ತು ಔಷಧಿಗಳನ್ನು ನಾಶಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth