ಸೌದಿಯಲ್ಲಿರುವ ಭಾರತೀಯರಿಗೆ, ಹಜ್ ಗೂ ಹೋದವರಿಗೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವುದು ಕಡ್ಡಾಯ: ಸೌದಿ ಆರೋಗ್ಯ ಸಚಿವಾಲಯ ಹೇಳಿಕೆ

ಸೌದಿಯಲ್ಲಿರುವ ಭಾರತೀಯರೂ ಸೇರಿದಂತೆ ಹಜ್ ನಿರ್ವಹಣೆಗೆಂದು ಹೋಗುವವರು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಸೌದಿ ಆರೋಗ್ಯ ಸಚಿವಾಲಯ ತಿಳಿಸಿದೆ. ಇತರ ದೇಶಗಳಿಂದ ಹಜ್ ನಿರ್ವಹಣೆಗೆಂದು ಬರುವವರು ಹತ್ತು ದಿನಗಳ ಮೊದಲು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಬೇಕಾಗಿದೆ.
ಜಗತ್ತಿನ ವಿವಿಧ ಭಾಗಗಳಿಂದ ಹಜ್ ಗಾಗಿ ಯಾತ್ರಾರ್ಥಿಗಳು ಬರುತ್ತಿದ್ದು ಅಲ್ಲಿನ ಪರಿಸ್ಥಿತಿ ಬೇರೆಬೇರೆ ಇರುತ್ತದೆ. ಪ್ರತಿಯೊಬ್ಬರ ಆರೋಗ್ಯವನ್ನು ಖಚಿತಪಡಿಸುವುದಕ್ಕಾಗಿ ವ್ಯಾಕ್ಸಿನೇಷನ್ ಅನ್ನು ಕಡ್ಡಾಯಗೊಳಿಸಲಾಗಿದೆ. ಸೌದಿ ಯ ಹೊರಗಿನಿಂದ ಹಜ್ ನಿರ್ವಹಣೆಗಾಗಿ ಬರುವವರು ಕಳೆದ ಐದು ವರ್ಷಗಳಿಂದ ಕೊರೋನ ಸಹಿತ ಪ್ರತಿರೋಧ ವ್ಯಾಕ್ಸಿನೇಷನ್ ಅನ್ನು ಹಾಕಿರುವುದನ್ನು ಖಚಿತಪಡಿಸಬೇಕಾಗಿದೆ. ಮೆನಿಂಜಟಿಸ್, ಸೀಸನಲ್ ಇನ್ಫ್ಲುಎನ್ಜಾ ವ್ಯಾಕ್ಸಿನೇಷನನ್ನು ಕೂಡ ಹಜ್ ಯಾತ್ರಾರ್ಥಿಗಳು ಹಾಕಿಸಿಕೊಳ್ಳಬೇಕಾಗಿದೆ. ಸೌದಿಯಿಂದ ಹಜ್ ನಿರ್ವಹಣೆಗೆಂದು ಬರುವವರು ಕೂಡ ಈ ವ್ಯಾಕ್ಸಿನೇಷನ್ ಹಾಕಿಸಿಕೊಂಡಿರುವುದನ್ನು ಖಚಿತಪಡಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth