ದಾರಿ ತಪ್ಪಿಸೋ ಜಾಹೀರಾತುಗಳನ್ನು ವಾಪಸ್ ಪಡೆಯಲು ಏನ್ ಕ್ರಮ ಕೈಗೊಂಡಿದ್ದೀರಿ..? ಅಫಿಡವಿಟ್‌ ಸಲ್ಲಿಸಲು ಪತಂಜಲಿಗೆ ಕೋರ್ಟ್ ಸೂಚನೆ - Mahanayaka

ದಾರಿ ತಪ್ಪಿಸೋ ಜಾಹೀರಾತುಗಳನ್ನು ವಾಪಸ್ ಪಡೆಯಲು ಏನ್ ಕ್ರಮ ಕೈಗೊಂಡಿದ್ದೀರಿ..? ಅಫಿಡವಿಟ್‌ ಸಲ್ಲಿಸಲು ಪತಂಜಲಿಗೆ ಕೋರ್ಟ್ ಸೂಚನೆ

14/05/2024

ಪತಂಜಲಿ ಉತ್ಪನ್ನಗಳ ದಾರಿ ತಪ್ಪಿಸುವ ಜಾಹೀರಾತುಗಳನ್ನು ವಾಪಸ್‌ ಪಡೆಯಲು ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ವಿವರಿಸುವ ಅಫಿಡವಿಟ್‌ ಸಲ್ಲಿಸಲು ಪತಂಜಲಿ ಸಂಸ್ಥೆಗೆ ನ್ಯಾಯಾಲಯವು ಮೂರು ವಾರಗಳ ಕಾಲಾವಕಾಶ ನೀಡಿದೆ. ಯೋಗ ಕ್ಷೇತ್ರದಲ್ಲಿ‌ ರಾಮ್‌ ದೇವ್ ಮಾಡಿದ್ದನ್ನು ಪತಂಜಲಿಯಲ್ಲಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪರವಾನಗಿ ರದ್ದುಗೊಂಡಿರುವಂತಹ ಪತಂಜಲಿ ಆಯುರ್ವೇದ ಸಂಸ್ಥೆಯ ದಾರಿತಪ್ಪಿಸುವ ಜಾಹೀರಾತುಗಳ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಕೇಸಿನಲ್ಲಿ ತನ್ನ ಆದೇಶವನ್ನು ಸುಪ್ರೀಂ ಕೋರ್ಟ್‌ ಇಂದು ಕಾಯ್ದಿರಿಸಿದೆ.
ಇಂದು ವಿಚಾರಣೆ ವೇಳೆ ಬಾಬಾ ರಾಮದೇವ್‌ ರಿಗೆ ತಮ್ಮ ಪ್ರಭಾವ ಸರಿಯಾದ ರೀತಿಯಲ್ಲಿ ಬಳಸುವಂತೆ ನ್ಯಾಯಪೀಠ ಸಲಹೆ ನೀಡಿದೆ.

ಬಾಬಾ ರಾಮದೇವ್‌ ಅವರು ಯೋಗ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ಧಾರೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದಾಗ, ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೊಹ್ಲಿ, “ಯೋಗ ಕ್ಷೇತ್ರದಲ್ಲಿ ಮಾಡಿದ್ದು ಒಳ್ಳೆಯದು, ಆದರೆ ಪತಂಜಲಿ ಉತ್ಪನ್ನಗಳು ಬೇರೆ ವಿಚಾರ” ಎಂದು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ