ಪ್ರಜ್ವಲ್ ಯಾವಾಗ ಬರುತ್ತಾರೆ ಅಂತ ಯಾರಿಗೂ ಗೊತ್ತಿಲ್ಲ: ಜಿ.ಟಿ. ದೇವೇಗೌಡ

ಬೆಂಗಳೂರು : ಪ್ರಜ್ವಲ್ ಎಲ್ಲಿದ್ದಾರೆ? ಯಾವಾಗ ಬರುತ್ತಾರೆ? ಎಂದು ಯಾರಿಗೂ ಗೊತ್ತಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಎಲ್ಲಿದ್ದಾರೆ? ಯಾವಾಗ ಬರುತ್ತಾರೆ? ಎಂದು ಯಾರಿಗೂ ಗೊತ್ತಿಲ್ಲ. ಪ್ರಜ್ವಲ್ ಮನೆಯವರಿಗೂ ಗೊತ್ತಿಲ್ಲ. ನಮಗೂ ಗೊತ್ತಿಲ್ಲ ಪ್ರಜ್ವಲ್ ಯಾರು ಸಂಪರ್ಕಕ್ಕೂ ಕೂಡ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಪ್ರಜ್ವಲ್ ನನ್ನು ಪಕ್ಷದಿಂದ ಅಮಾನತು ಕೂಡ ಮಾಡಲಾಗಿದೆ. ತಪ್ಪು ಮಾಡಿದರೆ ನೂರಕ್ಕೆ ನೂರು ಶಿಕ್ಷೆ ಆಗಲಿ. ಇನ್ನೇನಿದ್ದರೂ ಕೂಡ ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಪ್ರಜ್ವಲ್ ವಿದೇಶಕ್ಕೆ ಯಾಕೆ ಹೋದರು ಯಾವಾಗ ಬರುತ್ತಾರೆ, ಯಾವಾಗ ಬರುವುದಿಲ್ಲ ಇದು ಯಾವುದರ ಕುರಿತು ನಮಗೆ ಸುಳಿವು ಇಲ್ಲ. ಅವರ ಕುಟುಂಬಕ್ಕೆ ಗೊತ್ತಿಲ್ಲದ ಮೇಲೆ ನಮಗೆ ಹೇಗೆ ಗೊತ್ತಿರುತ್ತದೆ ಎಂದು ಮರು ಪ್ರಶ್ನೆ ಹಾಕಿದರು.
ಈಗಾಗಲೇ ಬ್ಲೂ ಕಾರ್ನರ್ ಹಾಗೂ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ. ಇನ್ನು ಮುಂದಿನದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97