ಸಂಘ ಪರಿವಾರದ ದ್ವೇಷ ಪ್ರಚಾರಕ್ಕೆ ಗುರಿಯಾಗಿರುವ ಖ್ಯಾತ ನಟ ಮಮ್ಮುಟ್ಟಿಗೆ ಭಾರಿ ಬೆಂಬಲ - Mahanayaka

ಸಂಘ ಪರಿವಾರದ ದ್ವೇಷ ಪ್ರಚಾರಕ್ಕೆ ಗುರಿಯಾಗಿರುವ ಖ್ಯಾತ ನಟ ಮಮ್ಮುಟ್ಟಿಗೆ ಭಾರಿ ಬೆಂಬಲ

15/05/2024


Provided by

ಸಂಘ ಪರಿವಾರದ ದ್ವೇಷ ಪ್ರಚಾರಕ್ಕೆ ಗುರಿಯಾಗಿರುವ ಖ್ಯಾತ ನಟ ಮಮ್ಮುಟ್ಟಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಸಿಪಿಐ ಸಿಪಿಐಎಂ ಕಾಂಗ್ರೆಸ್ ಸಹಿತ ವಿವಿಧ ರಾಜಕೀಯ ಮುಖಂಡರು ಮಮ್ಮುಟ್ಟಿ ಅವರ ಪರ ನಿಂತಿದ್ದಾರಲ್ಲದೇ ಬಿಜೆಪಿಯ ದ್ವೇಷ ಪ್ರಚಾರವನ್ನು ಖಂಡಿಸಿದ್ದಾರೆ.

ಪುಯು ಸಿನಿಮಾದ ಬಗ್ಗೆ ನಿರ್ದೇಶಕ ಆನ್ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದ ಬಳಿಕ ಸಂಘ ಪರಿವಾರ ಟಾರ್ಗೆಟ್ ಮಾಡಿತ್ತು. ಪುಯು ಸಿನಿಮಾ ಬ್ರಾಹ್ಮಣ ವಿರೋಧಿ ಮತ್ತು ಧರ್ಮ ದ್ವೇಷದಿಂದ ಕೂಡಿದೆ ಹಾಗೂ ಇದರ ಹಿಂದೆ ಮಮ್ಮುಟ್ಟಿ ಪಾತ್ರ ಇದೆ ಎಂದು ಸಂಘ ಪರಿವಾರ ಹೇಳಿಕೊಂಡಿತ್ತು. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಸಾಕಷ್ಟು ಟೀಕೆ ವಿಮರ್ಶೆಗಳು ಕೂಡ ಬಂದಿತ್ತು. ಈ ಟೀಕೆಯ ಬೆನ್ನಿಗೆ ಕೇರಳಕ್ಕೆ ಕೇರಳವೇ ಇದೀಗ ಸಂಘ ಪರಿವಾರದ ವಿರುದ್ಧ ನಿಂತಿದೆ. ಸಿಪಿಐ ಸಿ ಪಿ ಐ ಎಂ, ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ಮತ್ತು ಸಾಮಾಜಿಕ ಮುಖಂಡರು ಮಮ್ಮುಟಿಯ ಬೆನ್ನಿಗೆ ನಿಂತಿದ್ದಾರೆ. ನಿಮ್ಮ ಧರ್ಮ ದ್ವೇಷದ ಬೇಳೆ ಇಲ್ಲಿ ಬೇಯಲ್ಲ ಎಂದು ಕೇರಳಿಗರು ಸಂಘ ಪರಿವಾರಕ್ಕೆ ಪ್ರಬಲ ತಿರುಗೇಟು ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ