ಮದುವೆ ಫಿಕ್ಸ್ ಆಗಿದೆ: ವಧು ಮಡಿಕೇರಿಯಲ್ಲಿ, ವರ ಕೇರಳದಲ್ಲಿ ಲಾಕ್! - Mahanayaka
8:10 PM Wednesday 15 - October 2025

ಮದುವೆ ಫಿಕ್ಸ್ ಆಗಿದೆ: ವಧು ಮಡಿಕೇರಿಯಲ್ಲಿ, ವರ ಕೇರಳದಲ್ಲಿ ಲಾಕ್!

27/02/2021

ಕೊಡಗು: ಮಡಿಕೇರಿಯಲ್ಲಿ ಸೋಮವಾರ ನಡೆಯಬೇಕಿದ್ದ ಮದುವೆಗೆ ಕೊರೊನಾ  ರೂಲ್ಸ್ ಅಡ್ಡಿಯಾಗಿದ್ದು, ಮಡಿಕೇರಿ ವಧುವಿಗೆ ಕೇರಳದ ವರನ ಜೊತೆ ವಿವಾಹ ನಿಶ್ಚಯವಾಗಿದ್ದು, ಆದರೆ ಈ ಮದುವೆಗೆ ಕೊರೊನಾ ರೂಲ್ಸ್ ಅಡ್ಡಿ ಪಡಿಸಿದ್ದು, ಇದೀಗ ಮದುವೆ ನಡೆಯುತ್ತಾ? ಇಲ್ವಾ ಎನ್ನುವ ಆತಂಕ ಸೃಷ್ಟಿಯಾಗಿದೆ.


Provided by

ಕೇರಳದಲ್ಲಿ ಕೊರೊನಾ ಹೆಚ್ಚಳವಾಗಿರುವ ಹಿನ್ನೆಲೆ ಯಲ್ಲಿ ಕೇರಳದಿಂದ ಕರ್ನಾಟಕ  ಮುಕ್ತಪ್ರವೇಶನಕ್ಕೆ ನಿರ್ಬಂಧಹಾಕಿದ್ದು72 ಗಂಟೆಗಳ  ಮುಂಚಿತವಾಗಿ ಕೊರೊನಾ ನೆಗಟಿವ್ ರಿಪೋರ್ಟ್ ಕಡ್ಡಯವಾಗಿದೆ. ಭಾನುವಾರ ಸರ್ಕಾರಿ ಪ್ರಯೋಗಾಲಯ ಬಂದ್ ಆಗಿದ್ದು ಕೊರೊನಾ ವರದಿ ಸಿಗದೆ ವರನ ಕಡೆಯವರು ಪರಾದಟ ನಡೆಸುವಂತಾಗಿದೆ.

ಭಾನುವಾರ ಸರ್ಕಾರಿ ಪ್ರಯೋಗಾಲಯ ಮುಚ್ಚಿದ್ದು ಖಾಸಗಿ ಪ್ರಯೊಗಾಲಯದ ಲ್ಲಿ 2,500 ರೂಪಾಯಿ ಶುಲ್ಕ ತೆಗೆದುಕೊಳ್ಳುತ್ತಾರೆ. ಇನ್ನು ಮಡಿಕೇರಿಗೆ  ವಿವಾಹಕ್ಕೆ ಬರಲು 15 ಮಂದಿಗೆ 35,000 ರೂಪಾಯಿ ಶುಲ್ಕವಾಗುತ್ತದೆ. ಹೀಗಾಗಿ ಅಷ್ಷೊಂದು ಹಣವಿಲ್ಲದೆ ವರನ ಕಡೆಯವರು ಪರದಾಡುತ್ತಿದ್ದು ಮದುವೆ ನಡೆಯುತ್ತದೆಯೋ  ಇಲ್ಲವೊ ಎಂಬ  ಆಂತಕ ಮೂಡಿದೆ.

ವರದಿ ಇಲ್ಲದೆ ಪ್ರವೇಶ ನೀಡುವಂತೆ ವಧು  ಕಡೆಯವರು ಸದ್ಯ ಜಿಲ್ಲಾಡಳಿತ ಮೊರೆಹೋಗಿದ್ದು  ಮದುವೆಗೆ ವರನ ಕಡೆಯವರು ಮಡಿಕೇರಿಗೆ ಬರಲು ಮುಕ್ತ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಒಟ್ಟಾರೆ  ಕೊರೊನಾ ದೇಶವನ್ನುವ್ಯಾಪಿಸಿ ಒಂದು ವರ್ಷ ಕಳೆದರೂ ಇನ್ನು ಕೂಡ ವಿವಾಹದಂತಹ ಸಮಾರಂಭಗಳನ್ನು ನಡೆಸಲು ಜನ ಆತಂಕ ಪಡುವಂತಾಗಿದೆ.

ಇತ್ತೀಚಿನ ಸುದ್ದಿ