ದೆಹಲಿ ಸಿಎಂಗೆ ಬೆದರಿಕೆ: ಆರೋಪಿತನ ಹೆಡೆಮುರಿ ಕಟ್ಟಿದ ಪೊಲೀಸರು - Mahanayaka

ದೆಹಲಿ ಸಿಎಂಗೆ ಬೆದರಿಕೆ: ಆರೋಪಿತನ ಹೆಡೆಮುರಿ ಕಟ್ಟಿದ ಪೊಲೀಸರು

22/05/2024


Provided by

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೀವ ಬೆದರಿಕೆ ಹಾಕಿದ ಬರಹವನ್ನು ಬರೆದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ರಜೋರಿ ಗಾರ್ಡನ್ ಮೆಟ್ರೋ ಸ್ಟೇಷನ್ ನಲ್ಲಿ ಅಂಕಿತ್ ಗೋಯಲ್ ಎಂಬಾತ ಬೆದರಿಕೆಯ ಸಂದೇಶವನ್ನು ಬರೆಯುವ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಬಂಧಿತ ಆರೋಪಿಯನ್ನು 33 ವರ್ಷದ ಅಂಕಿತ್ ಗೋಯಲ್ ಎಂದು ಗುರುತಿಸಲಾಗಿದೆ.
ಮೆಟ್ರೊ ರೈಲುಗಳ ಕೋಚ್ಗಳು ಹಾಗೂ ಸೈನ್ ಬೋರ್ಡ್ ಗಳಲ್ಲಿ ಗೀಚುತ್ತಿದ್ದ ಯುವಕನ ದೃಶ್ಯಗಳು ಸಿಸಿ ಕ್ಯಾಮರಾ ವಿಡಿಯೊದಲ್ಲಿ ಕಂಡುಬಂದಿದ್ದವು. ಅಂಕಿತ್ ಗೋಯಲ್ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಗೀಚುಬರಹಗಳ ಫೋಟೊಗಳನ್ನು ಹಂಚಿಕೊಂಡಿದ್ದ. ಆತನೇ ಗೀಚುಬರಹ ಬರೆದಿರಬಹುದೆಂದು ಪೊಲೀಸರು ಶಂಕಿಸಿದ್ದರು.
ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ