ಲಾಕಪ್ ಡೆತ್ ಕೇಸ್: ಪೊಲೀಸ್ ಠಾಣೆ ಬಳಿ ದಾಂಧಲೆ ನಡೆಸಿದ್ದ 10 ಆರೋಪಿಗಳು ಪೊಲೀಸ್ ವಶಕ್ಕೆ - Mahanayaka

ಲಾಕಪ್ ಡೆತ್ ಕೇಸ್: ಪೊಲೀಸ್ ಠಾಣೆ ಬಳಿ ದಾಂಧಲೆ ನಡೆಸಿದ್ದ 10 ಆರೋಪಿಗಳು ಪೊಲೀಸ್ ವಶಕ್ಕೆ

channagiri case
25/05/2024

ದಾವಣಗೆರೆ:  ಚನ್ನಗಿರಿ ಠಾಣೆ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಿ ದಾಂಧಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ  10 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಟ್ಕಾ ಆರೋಪದಲ್ಲಿ ಆದಿಲ್​ ಎಂಬಾತನನ್ನು ಪೊಲೀಸರು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದಿದ್ದರು. ಆದರೆ ಪೊಲೀಸ್ ವಶದಲ್ಲಿದ್ದಾಗ ಆದಿಲ್ ಮೃತಪಟ್ಟಿದ್ದ. ಆದಿಲ್ ಸಾವು ಲಾಕಪ್ ಡೆತ್ ಎಂದು ಆರೋಪಿಸಿ, ಉದ್ರಿಕ್ತರ ಗುಂಪು ಚನ್ನಗಿರಿ ಠಾಣೆ ಮೇಲೆ ದಾಳಿ ನಡೆಸಿ ಪರಾರಿಯಾಗಿತ್ತು.

ಸದ್ಯ ಸಿಸಿ ಕ್ಯಾಮರಾ, ಮೊಬೈಲ್ ಚಿತ್ರೀಕರಣದ ವಿಡಿಯೋ ಹಾಗೂ ಸಾರ್ವಜನಿಕರು ಚಿತ್ರೀಕರಿಸಿದ ವಿಡಿಯೋ ಆಧರಿಸಿ, ದಾಂಧಲೆ ನಡೆಸಿದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದು, ಸದ್ಯ 10 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಸುಮಾರು 40ಕ್ಕೂ ಅಧಿಕ ಕಿಡಿಗೇಡಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ