ಹಾವು ಕಚ್ಚಿದ್ರು, ಮುಳ್ಳು ಚುಚ್ಚಿದೆ ಎಂದು ಸುಮ್ಮನಿದ್ದ ವ್ಯಕ್ತಿ ಸಾವು! - Mahanayaka
12:09 AM Monday 1 - September 2025

ಹಾವು ಕಚ್ಚಿದ್ರು, ಮುಳ್ಳು ಚುಚ್ಚಿದೆ ಎಂದು ಸುಮ್ಮನಿದ್ದ ವ್ಯಕ್ತಿ ಸಾವು!

chikkamagaluru
27/05/2024


Provided by

ಚಿಕ್ಕಮಗಳೂರು:  ಹಾವು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.

ಕರಕುಚ್ಚಿ ಗ್ರಾಮದ ಗಂಗಪ್ಪ (48) ಮೃತಪಟ್ಟವರಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಎರಡು ಬಾರಿ ಕಚ್ಚಿತ್ತು. ಆದರೆ ಯಾವುದೋ ಮುಳ್ಳು ಚುಚ್ಚಿದೆ ಎಂದು ಗಂಗಪ್ಪ ಭಾವಿಸಿದ್ದರು.

ಮನೆಗೆ ಬಂದು ಊಟ ಮಾಡಿದ ಬಳಿಕ ಗಂಗಪ್ಪ ಮಲಗಿದ್ದಾರೆ. ಆ ಬಳಿಕ ಅವರು ಎದ್ದಿಲ್ಲ. ಮನೆಯವರು ಗಂಗಪ್ಪ ಅವರನ್ನು ಎಬ್ಬಿಸಲು ನೋಡಿದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಸದ್ಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ