ಬೈಕ್-ಕ್ಯಾಂಟರ್  ನಡುವೆ ಅಪಘಾತ: ಯುವಕ ಸಾವು, ನಾಲಿಗೆ ಕಳೆದುಕೊಂಡ ಯುವತಿ - Mahanayaka
11:49 AM Saturday 23 - August 2025

ಬೈಕ್–ಕ್ಯಾಂಟರ್  ನಡುವೆ ಅಪಘಾತ: ಯುವಕ ಸಾವು, ನಾಲಿಗೆ ಕಳೆದುಕೊಂಡ ಯುವತಿ

chikkamagaluru
27/05/2024


Provided by

ಚಿಕ್ಕಮಗಳೂರು:  ಬೈಕ್-ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರೆ ಯುವತಿ ನಾಲಿಗೆ ಕಟ್ ಆದ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ನಡೆದಿದೆ.

26 ವರ್ಷದ ಶಿವರಾಜ್ ಮೃತಪಟ್ಟ ಯುವಕನಾಗಿದ್ದು,  20 ವರ್ಷದ ಲಾವಣ್ಯ ನಾಲಿಗೆ ಕಳೆದುಕೊಂಡ ಯುವತಿಯಾಗಿದ್ದಾಳೆ.

ಯುವತಿ  ಚಿಕ್ಕಮಗಳೂರಿನ ವಿದ್ಯಾರ್ಥಿ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದಳು. ಶಿವರಾಜ್ ಮತ್ತು ಲಾವಣ್ಯ ಇಬ್ಬರು ಅರಸೀಕೆರೆ ತಾಲೂಕಿನ ಬಂದೂರು ಮೂಲದವರಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ