ಸಂಗಾತಿಯನ್ನು ಹೆದರಿಸಲು ರೈಲ್ವೆ ಹಳಿಯ ಮೇಲೆ ಹಾರಿದ ಮಹಿಳೆ..! ಕೊನೆಗೆ ಏನಾಯ್ತು..? - Mahanayaka

ಸಂಗಾತಿಯನ್ನು ಹೆದರಿಸಲು ರೈಲ್ವೆ ಹಳಿಯ ಮೇಲೆ ಹಾರಿದ ಮಹಿಳೆ..! ಕೊನೆಗೆ ಏನಾಯ್ತು..?

29/05/2024


Provided by

ಆಗ್ರಾದ ರಾಜಾ ಕಿ ಮಂಡಿ ನಿಲ್ದಾಣದಲ್ಲಿ ರೈಲು ಡಿಕ್ಕಿ ಹೊಡೆದ ಪರಿಣಾಮ ರಾಣಿ ಎಂಬ 38 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ರಾಣಿ ತನ್ನ ಲಿವ್-ಇನ್ ಸಂಗಾತಿ ಕಿಶೋರ್ ಅವರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದಳು. ಈ ಮಧ್ಯೆ ಅವನನ್ನು ಹೆದರಿಸಲು ರೈಲ್ವೆ ಹಳಿಗಳ ಮೇಲೆ ಹಾರಿದ್ದಾಳೆ.

ಕೆಲವೇ ನಿಮಿಷಗಳಲ್ಲಿ, ಲಿವ್-ಇನ್ ಸಂಗಾತಿಯ ಕುಡಿತದ ಅಭ್ಯಾಸದ ಬಗ್ಗೆ ಬೈಯಲು ಪ್ರಾರಂಭಿಸಿದಳು. ಅಲ್ಲದೇ ರಾಣಿ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದಾಗ ಗಲಾಟೆ ಜೋರಾಯಿತು.
ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಲು ಕಿಶೋರ್ ಪ್ರಯತ್ನಿಸಿದರೂ, ಅವಳು ಅವನನ್ನು ರಾಜಾ ಕಿ ಮಂಡಿ ನಿಲ್ದಾಣಕ್ಕೆ ಕರೆದೊಯ್ದಳು.

ರೈಲ್ವೇ ನಿಲ್ದಾಣವನ್ನು ತಲುಪಿದ ನಂತರ ಇಬ್ಬರೂ ಪ್ಲಾಟ್ಫಾರ್ಮ್ ಸಂಖ್ಯೆ 2 ರಲ್ಲಿ ಕುರ್ಚಿಗಳ ಮೇಲೆ ಕುಳಿತು ತಮ್ಮ ಮಾತಿನ ಚಕಮಕಿಯನ್ನು ಮುಂದುವರಿಸಿದರು. ವಾಗ್ವಾದದ ನಾಟಕೀಯ ತಿರುವಿನಲ್ಲಿ ಕಿಶೋರ್ ಅವರನ್ನು ಹೆದರಿಸುವ ಉದ್ದೇಶದಿಂದ ರಾಣಿ ಹಳಿಗಳ ಮೇಲೆ ಹಾರಿದ್ದಾಳೆ.

ಆಗ ವೇಗವಾಗಿ ಬರುತ್ತಿದ್ದ ಕೇರಳ ಎಕ್ಸ್ ಪ್ರೆಸ್ ಬಗ್ಗೆ ಅರಿವಿಲ್ಲದ ಆಕೆಗೆ ಸಮಯಕ್ಕೆ ಸರಿಯಾಗಿ ಪ್ಲಾಟ್ ಫಾರ್ಮ್ ಗೆ ಏರಲು ಸಾಧ್ಯವಾಗಲಿಲ್ಲ. ಅವಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ರೈಲು ಅವಳಿಗೆ ಡಿಕ್ಕಿ ಹೊಡೆದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ