ಬಿಹಾರದಲ್ಲಿ ಬಿಸಿಗಾಳಿ: ಜೂನ್ 8ರವರೆಗೆ ಶಾಲೆಗಳು, ಕೋಚಿಂಗ್ ಸೆಂಟರ್ ಗಳು ಬಂದ್

ದೇಶದ ಅನೇಕ ಪ್ರದೇಶಗಳ ಮೇಲೆ ಇನ್ನೂ ಕೂಡಾ ಪರಿಣಾಮ ಬೀರುತ್ತಿರುವ ತೀವ್ರ ಶಾಖದಿಂದಾಗಿ ಬಿಹಾರ ಸರ್ಕಾರವು ರಾಜ್ಯದ ಎಲ್ಲಾ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ ಬ್ರಜೇಶ್ ಮೆಹ್ರೋತ್ರಾ ಅವರಿಗೆ ಶಾಲೆಗಳನ್ನು ಮುಚ್ಚುವ ಆದೇಶವನ್ನು ನೀಡಿದ್ದಾರೆ.
ಬಿಹಾರ ಸಿಎಂಒ ಪ್ರಕಾರ, ಬಿಕ್ಕಟ್ಟು ನಿರ್ವಹಣಾ ಗುಂಪಿನ ಸಭೆಯನ್ನು ಕರೆಯಲು ಮತ್ತು ಇತರ ಅಗತ್ಯ ಕ್ರಮಗಳನ್ನು ನಿರ್ಧರಿಸಲು ಸಿಎಂ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ತೀವ್ರ ತಾಪಮಾನದಿಂದಾಗಿ ಬಿಹಾರದ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಕೋಚಿಂಗ್ ಕೇಂದ್ರಗಳು ಮತ್ತು ಶಾಲೆಗಳನ್ನು ಮೇ 30 ರಿಂದ ಜೂನ್ 8 ರವರೆಗೆ ಮುಚ್ಚಲಾಗುತ್ತದೆ.
ಈ ಮಧ್ಯೆ ರಾಜ್ಯದಲ್ಲಿ ತೀವ್ರ ಶಾಖದಿಂದಾಗಿ ಶಾಲಾ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಬಿಹಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಮುಂದಿನ ಕೆಲವು ದಿನಗಳವರೆಗೆ ಬಿಹಾರದ ಎಲ್ಲಾ ಶಾಲೆಗಳನ್ನು ಮುಚ್ಚಲು ಮತ್ತು ಎಲ್ಲಾ ಜಿಲ್ಲಾ ಅಧಿಕಾರಿಗಳು ಮಕ್ಕಳಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ನಿರ್ದೇಶನ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth